ಬೈಂದೂರಿನ ಮಾಜಿ ಶಾಸಕರಾದ ಬಿ ಎಂ ಸುಕುಮಾರ್ ಶೆಟ್ಟಿ ಇವರು ನೂತನ ಕಚೇರಿಯನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಬೈಂದೂರು ಶಾಸಕರಾದ ಗುರುರಾಜ್ ಶೆಟ್ಟಿ ಗಂಟಿಹೊಳೆ, ಸಂಸ್ಥೆಯ ಸ್ಥಾಪಕರಾದ ಎಸ್ ರಾಜು ಪೂಜಾರಿ, ಮಾಜಿ ಶಾಸಕರಾದ ಗೋಪಾಲ ಪೂಜಾರಿ, ಸಹಕಾರಿ ದುರಿಣರಾದ ಪ್ರಕಾಶ್ ಚಂದ್ರ ಶೆಟ್ಟಿ, ನಾರಾಯಣ ಹೆಗ್ಡೆ, ಸುರೇಶ್ ಶೆಟ್ಟಿ, ಮಹೇಶ್ ಹೆಗಡೆ, ಸೂಲಿಯಣ್ಣ ಶೆಟ್ಟಿ, ಗೋಕುಲ್ ಶೆಟ್ಟಿ, ವಿಜಯ ಶೆಟ್ಟಿ, ಮದನ್ ಕುಮಾರ್, ದೀಪಕ್ ಶೆಟ್ಟಿ ಮುಂತಾದ ಗಣ್ಯರು ಮತ್ತು ಆಡಳಿತ ಮಂಡಳಿ ನಿರ್ದೇಶಕರು ಉಪಸ್ಥಿತರಿದ್ದರು.
ಉಪ್ಪುಂದ ಗ್ರಾಹಕರಿಗೆ ಉತ್ತಮ ಸೇವೆ ನೀಡುವ ದೃಷ್ಟಿಯಲ್ಲಿ, ಉತ್ತಮ ದೃಷ್ಟಿ ಕೋನದೊಂದಿಗೆ, ಸುಸಜ್ಜಿತ ಕಟ್ಟಡದೊಂದಿಗೆ ಶಾಖೆಯನ್ನು ಆರಂಭಿಸಲಾಗಿದ್ದು, ಸಂಸ್ಥೆ ಈಗಾಗಲೇ ವಿವಿಧಡೆ ಏಳು ಶಾಖೆಯನ್ನು ಹೊಂದಿದೆ.

ಈ ಸಂಸ್ಥೆಯ ಸ್ಥಾಪಕರು ಹಾಗೂ ಸಹಕಾರಿ ಸಂಘದಲ್ಲಿ ಸಾಧನೆ ಮಾಡಿದ ರಾಜು ಪೂಜಾರಿಯವರ ಪರಿಕಲ್ಪನೆಯಲ್ಲಿ ಈ ಭಾಗದ ಈ ಸಂಸ್ಥೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿದೆ.

ಸಂಸ್ಥೆ ಸ್ಥಾಪಕರಾದ ರಾಜು ಪೂಜಾರಿಯವರು ಜಿ ಎಸ್ ಆಚಾರ್ಯ ಮತ್ತು ದಿ. ರಾಮ ಪೂಜಾರಿಯವರ ಕಾರ್ಯವೈಖರಿಯನ್ನು ಸ್ಮರಿಸಿ ಅವರು ಪುಣ್ಯದ ಫಲ ನಮ್ಮಿ ಸಂಸ್ಥೆಯ ಮೇಲಿದೆ ಎಂದು ಮಾತನಾಡಿದರು. ಹಾಗೆ ಬಿ ಎಂ ಸುಕುಮಾರ್ ಶೆಟ್ಟಿ ಅವರು ಮಾತನಾಡಿ ಸಂಸ್ಥೆಯ ಏಳಿಗೆ ಬಗ್ಗೆ ಹಿತನುಡಿ ನೀಡಿ, ಮಾನ್ಯ ಶಾಸಕರಾದ ಗುರುರಾಜ್ ಗಂಟಿಹೊಳೆ ಮಾತನಾಡಿ ಸಂಸ್ಥೆಯ ಪ್ರತಿ ಹಂತದ ಏಳಿಗೆಯಲ್ಲಿ ಇರುವಂತಹ ರಾಜು ಪೂಜಾರಿ ಅವರ ಪಾತ್ರ, ಕೆಲಸದ ಮೇಲಿರುವ ನಿಷ್ಠೆ ಎಲ್ಲವನ್ನು ಪ್ರಶಂಸಿಸಿದರು. ಹಾಗೆ ಬೈಂದೂರು ಕ್ಷೇತ್ರದಲ್ಲಿ ಇವರಿಂದ ಇನ್ನಷ್ಟು ಹೆಚ್ಚಿನ ಕೆಲಸಗಳು ಆಗಲಿ ಎಂದು ಆಶಿಸಿದರು. ಹಾಗೆ ಮಾಜಿ ಶಾಸಕರಾದ ಗೋಪಾಲ್ ಪೂಜಾರಿ ಸೇರಿದಂತೆ ಅನೇಕರು ಮಾತನಾಡಿ ಶುಭ ಆಶಿಸಿದರು

URL has been copied successfully!

Discover more from BYNDOOR XPRESS

Subscribe now to keep reading and get access to the full archive.

Continue reading