ಸ. ಹಿ.ಪ್ರಾ.ಶಾಲೆ ಕರ್ಕುಂಜೆಯಲ್ಲಿ ನಡೆದ ಬೈಂದೂರು ವಲಯ ಮಟ್ಟದ 17ರ ವಯೋಮಿತಿಯ ಬಾಲಕಿಯರ ಕಬಡ್ಡಿ ಪಂದ್ಯಾಟದಲ್ಲಿ ಶ್ರೀ ಮೂಕಾಂಬಿಕಾ ದೇವಳದ ಪ್ರೌಢಶಾಲೆ ಕೊಲ್ಲೂರು ಬಾಲಕಿಯರ ತಂಡ ಪ್ರಥಮ ಸ್ಥಾನವನ್ನು ಪಡೆದುಕೊಂಡಿದೆ ಹಾಗೂ 14 ವಯೋಮಿತಿಯ ಬಾಲಕಿಯರ ತಂಡ ದ್ವಿತೀಯ ಸ್ಥಾನ ಪಡೆಯಿತು ಅದರಲ್ಲಿ 5ಜನ ವಿದ್ಯಾರ್ಥಿನಿಯರು ಜಿಲ್ಲಾ ಮಟ್ಟಕ್ಕೆ ಆಯ್ಕೆಗೊಂಡಿರುತ್ತಾರೆ



