ಉಪ್ಪುಂದ ಶ್ರೀ ಕ್ಷೇತ್ರ ಮಹಾತ್ಮೆ ಪ್ರಸಂಗ ಬಿಡುಗಡೆ ಸಮಾರಂಭ ಸಂಪನ್ನ

ಇತಿಹಾಸ ಪ್ರಸಿದ್ಧ ಉಪ್ಪುಂದ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಮಹಿಮೆ ಮತ್ತು ಇತಿಹಾಸ ಕಥೆಗಳನ್ನೊಳಗೊಂಡ “ಉಪ್ಪುಂದ ಕ್ಷೇತ್ರ ಮಹಾತ್ಮೆ”ಎನ್ನುವ ನೂತನ ಪ್ರಸಂಗ ಬಿಡುಗಡೆ ಕಾರ್ಯಕ್ರಮ ನಿನ್ನೆ ಉಪ್ಪುಂದ ಜಾತ್ರಾ ಮಹೋತ್ಸವದ ಪ್ರಯುಕ್ತ ರಾತ್ರಿ ಗಂಟೆ 8:30ಕ್ಕೆ ಉಪ್ಪುಂದ ದೇವಸ್ಥಾನದ ವಠಾರದಲ್ಲಿ ಶ್ರೀ ಕ್ಷೇತ್ರ ಕಳವಾಡಿ ಮೇಳದವರು ಆಡಿಸತೋರಿಸಿದರು. ದುರ್ಗಾಪರಮೇಶ್ವರಿ ದೇವಸ್ಥಾನ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಶ್ರೀ ಯು ಸತೀಶ್ ಶೆಟ್ಟಿ ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ವಹಿಸಿದ್ದರು. ಉಪ್ಪುಂದ ಕ್ಷೇತ್ರ ಮಹಾತ್ಮೆ ಪ್ರಸಂಗ ಕರ್ತರಾದಂತಹ ಶ್ರೀ ಬಸವರಾಜ್ ಶೆಟ್ಟಿಗಾರ್ ಇವರಿಗೆ ಸಭಾ ವೇದಿಕೆಯಲ್ಲಿ ದೇವಳದ ವತಿಯಿಂದ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಉಮಾಮಹೇಶ್ವರ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷರಾದ ಸೀತಾರಾಮ್ ಶೆಟ್ಟಿ, ಕಂಬದ ಕೋಣೆ ರೈತರ ಸೇವಾ ಸಹಕಾರಿ ಸಂಘ ನಿಯಮಿತ ಉಪ್ಪುಂದ ಇದರ ಅಧ್ಯಕ್ಷರಾದ ಪ್ರಕಾಶ್ಚಂದ್ರ ಶೆಟ್ಟಿ, ನಿವೃತ್ತ ಹೈಸ್ಕೂಲ್ ಮುಖ್ಯೋಪಾಧ್ಯಾಯರಾದ ವಿಶ್ವೇಶ್ವರ ಅಡಿಗ, ಗ್ರಾಮ ಪಂಚಾಯತ್ ಉಪ್ಪುಂದ ಅಧ್ಯಕ್ಷರಾದ ಮೋಹನಚಂದ್ರ, ಪ್ರಧಾನ ಅರ್ಚಕರಾದ ಪ್ರಕಾಶ್ ಉಡುಪರು, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಮದನ್ ಕುಮಾರ್ ಉಪ್ಪುಂದ, ಶ್ರೀ ಮಂಜುನಾಥ್ ಶೆಟ್ಟಿ‌ ಉಪ್ಪುಂದ ಓಕುಳಿ ಸಮಿತಿ ದುರ್ಗಾಪರಮೇಶ್ವರಿ ದೇವಸ್ಥಾನ ಉಪ್ಪುಂದ, ಕಾರ್ಯನಿರ್ವಹಣಾಧಿಕಾರಿ ರಮೇಶ್ ಅರ್ ಜಿ,ಶಂಕರ ಪುರಾಣಿಕ ಇನ್ನಿತರರು ಉಪಸ್ಥಿತರಿದ್ದರು.ಪ್ರದೀಪ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು‌.

URL has been copied successfully!

Discover more from BYNDOOR XPRESS

Subscribe now to keep reading and get access to the full archive.

Continue reading