ಕಂಬಳ ಕ್ಷೇತ್ರದಲ್ಲಿ ಸಾಧನೆಗೈದ “ಕುಟ್ಟಿ”ಕೋಣ ವಿಧಿವಶ

ಕಂಬಳ ಕ್ಷೇತ್ರದ ಅಡ್ಡ ಹಲಗೆ ವಿಭಾಗದಲ್ಲಿ ವಿಶಿಷ್ಟ ಸಾಧನೆಗೈದು , ಹಲವಾರು ಬಹುಮಾನ ಪಡೆದ ಅಜಕಲ್ ಕುಟ್ಟಿ,ಸುರತ್ಕಲ್ ಕುಟ್ಟಿ, ಬೋಳಾರ ಕುಟ್ಟಿ, ಹಲವು ಹೆಸರಿನಿಂದ ಕರೆಯಲ್ಪಟ್ಟ ಕಂಬಳದ ಕೋಣವು ನಿನ್ನೆ ಬೋಳಂಬಳ್ಳಿ ಪರಮೇಶ್ವರ ಭಟ್ಟರ ಹಟ್ಟಿಯಲ್ಲಿ ವಿಧಿವಶವಾಗಿದೆ.
ಬೋಳಾರ ತ್ರಿಶಾಲ್ ಕೆ ಪೂಜಾರಿಯವರ ಕುಟ್ಟಿ ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು,ಅದಕ್ಕೆ ಬೋಳಂಬಳ್ಳಿ ಹಟ್ಟಿಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಈ ಸುದ್ದಿ ತಿಳಿದ ತಕ್ಷಣ ಕಂಬಳ ಕ್ಷೇತ್ರದ ಸಾಕಷ್ಟು ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ, ಕುಟ್ಟಿಯ ಸಾಧನೆಯನ್ನು ಪ್ರಶಂಸಿಸಿದ್ದಾರೆ

URL has been copied successfully!

Discover more from BYNDOOR XPRESS

Subscribe now to keep reading and get access to the full archive.

Continue reading