ಸಂಭ್ರಮದಿಂದ ನಡೆದ ಇತಿಹಾಸ ಪ್ರಸಿದ್ಧ ತಗ್ಗರ್ಸೆ ಕಂಬಳ ಮಹೋತ್ಸವ

ಇತಿಹಾಸ ಪ್ರಸಿದ್ಧ ತಗ್ಗರ್ಸೆ ಸಾಂಪ್ರದಾಯಕ ಹೆಗ್ಡೆಯವರ ಮನೆ ಅನುವಂಶಿಯವಾಗಿ ನಡೆದು ಬಂದ ಕಂಬಳ ಮಹೋತ್ಸವ ವಿಜೃಂಭಣೆ ನಡೆಯಿತು.ಪ್ರತಿಯೊಂದು ಕೋಣದ ಮಾಲೀಕರು ತಮ್ಮ ಕೋಣವನ್ನು ಸಿಂಗರಿಸಿ ಕೋಣಗಳ ತಲೆಗೆ ಸಿಂಗಾರು ಕೊನೆಯನ್ನು ಕಟ್ಟಿ ವಾದ್ಯದ ಮೂಲಕ ದೇವರ ಹೆಸರನ್ನು ಹೊಳಲು ಕೂಗುತ್ತಾ ಕಂಬಳ ಗದ್ದೆಗೆ ಇಳಿಸಿ ನಂತರ ಕಂಬಳ ಗದ್ದೆಯ ನೀರನ್ನು ಕೋಣಗಳಿಗೆ ಸಿಂಪಡಿಸಿ ಸ್ವಲ್ಪ ನೀರನ್ನು ಕೋಣಗಳಿಗೆ ಕುಡಿಸಿ ತಮ್ಮ ಕೋಣವನ್ನು ಓಡಿಸಿ ಸ್ಪರ್ಧೆಯಲ್ಲಿ ಭಾಗವಹಿಸಿದರು,
ಕಂಬಳಕ್ಕೆ ಬರುವ ಕೋಣಗಳನ್ನು ವೀಳ್ಯ,ತೆಂಗಿನಕಾಯಿ,ಕಬ್ಬು ಹಾಗೆ ಕೋಣಗಳ ಮಾಲೀಕರಿಗೆ ಹೆಗಲಿಗೆ ಶಾಲು ಓದಿಸಿ ಗೌರವದಿಂದ ಬರಮಾಡಿಕೊಳ್ಳಲಾಯಿತು.ವಿಶಾಲವಾದ ಈ ಕಂಬಳ ಗದ್ದೆಯನ್ನು ತೋರಣಗಳಿಂದ. ಅಲಂಕಾರಿಕಲಾಗಿತ್ತು. ತಗ್ಗರ್ಸೆ ಹೆಗ್ಡೆಯವರ ಮನೆಯವರ ಕೋಣವನ್ನು ಸಿಂಗರಿಸಿಕೊಂಡು ದೈವ ದೇವರಿಗೆ ಪೂಜೆ ಸಲ್ಲಿಸಿದ ನಂತರ … ಹುಟ್ಟಿನ ಮನೆ ಕೋಣವನ್ನು ಮೆರವಣಿಗೆ ಮೂಲಕ ಕಂಬಳ ಗದ್ದೆಗೆ ತರುವುದರ ಮುಖೇನ ಕಂಬಳಕ್ಕೆ ಹಸಿರು ನಿಶಾನೆ ಸಿಕ್ಕಿತು ಈ ಬಾರಿ ಕಂಬಳದಲ್ಲಿ 53 ಜೊತೆ ಕೋಣಗಳು ಭಾಗವಹಿಸಿದವು. ಕೊನೆಯಲ್ಲಿ ತಗ್ಗರ್ಸೆ ಹೆಗ್ಡೆ ಮನೆಯ ಕೋಣಗಳು ಕಂಬಳ ಗದ್ದೆಯಲ್ಲಿ ಓಡಿಸುವುದರ ಮೂಲಕ ಕಂಬಳ ಮುಕ್ತಯಗೊಳಿಸಲಾಯಿತು .ವಿಜೇತವಾಗಿರುವ ಕೋಣಗಳಿಗೆ ಮೂಕಾಂಬಿಕಾ ಗೇರುಬೀಜ ಕಾರ್ಖಾನೆ ತೆಗ್ಗರ್ಸೆ ಇವರು ನಗದು ಮತ್ತು ಶಾಶ್ವತ ಫಲಕ ಬಹುಮಾನ ನೀಡಿದರು
ಸಮಾರೋಪ ಸಂದರ್ಭದಲ್ಲಿ ಟಿ. ನಾರಾಯಣ್ ಹೆಗ್ಡೆ, ಕಂಠದಮನೆ, ಕೊಲ್ಲೂರು ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಬಾಬು ಶೆಟ್ಟಿ, ದೀಪಕ್ ಕುಮಾರ್ ಶೆಟ್ಟಿ, ಬೈಂದೂರು ತಾಲೂಕು ಕಂಬಳ ಸಮಿತಿ ಅಧ್ಯಕ್ಷರಾದ ಮಂಜು ಪೂಜಾರಿ, ಉಡುಪಿ ಜಿಲ್ಲಾ ಸಾಂಪ್ರದಾಯಿಕ ಕಂಬಳ ಸಮಿತಿ ಗೌರವಾಧ್ಯಕ್ಷರಾದ ಶಾಂತರಾಮ ಶೆಟ್ಟಿ ಬಾರ್ಕೂರು,ಉದಯ ಶೆಟ್ಟಿ ಹಾಗೂ ತಗ್ಗರ್ಸೆ ಹೆಗ್ಡೆ ಕುಟುಂಬದವರು ಹಲವರು ಕಂಬಳ ಅಭಿಮಾನಿಗಳು ತಗ್ಗರ್ಸೆ ಗ್ರಾಮಸ್ಥರು ಉಪಸ್ಥಿತರಿದ್ದರು.

ಫಲಿತಾಂಶ
ಹಗ್ಗ ಅತಿ ಕಿರಿಯ ವಿಭಾಗ

ಪ್ರಥಮ: ಮಂಜುನಾಥ್ ಗೌಡ ಒಂದೆಲ್ಸ್ ಗೋಳಿಹೊಳೆ
ದ್ವಿತೀಯ: ಆಸಿಕಾನ ಜೋಗನಮನೆ ಭಟ್ಕಳ
ಹಗ್ಗ ಕಿರಿಯ ವಿಭಾಗ
ಪ್ರಥಮ : ಮಂಜುನಾಥ್ ಮೊಗವೀರ ಮೆತ್ತಿನ ಮನೆ ಮಯ್ಯಾಡಿ
ದ್ವಿತೀಯ: ಸಮೃದ್ಧಿ ಪ್ರಸಿದ್ಧಿ ಶ್ರೀ ದುರ್ಗಾ ಫ್ರೆಂಡ್ಸ್ ಕಂಚಿಕಾನ್
ಹಗ್ಗ ಹಿರಿಯ ವಿಭಾಗ
ಪ್ರಥಮ:ಪನ್ನಗ ಹೆಬ್ಬಾರ್ ಭಟ್ಕಳ
ದ್ವಿತೀಯ: ದಿ /ಶೀನ ಪೂಜಾರಿ ಕೋಟ ಪಡುಕೆರೆ

ಪ್ರಥಮ: ಆತ್ಮಜ ನೀರಜ್ ಬಾರ್ಕೂರು
ದ್ವಿತೀಯ: ತೆಕ್ಕಟ್ಟೆ ಮೇಲ್ಗುಡ್ಡೆ ಮನೆ ದಿ ಆನಂದ ದೇವಾಡಿಗ

URL has been copied successfully!

Discover more from BYNDOOR XPRESS

Subscribe now to keep reading and get access to the full archive.

Continue reading