ನಾಡ: ರೆಫೆರೆಂಡ್ ಫಾದರ್ ರೋಬರ್ಟ್ ಝಡ್ ಎಂ ಡಿಸೋಜಾ ಸ್ಮಾರಕ ಕೈಗಾರಿಕಾ ತರಬೇತಿ ಸಂಸ್ಥೆ ನಾಡ ಇದರ 2025-26 ನೇ ಸಾಲಿನ ಘಟಿಕೋತ್ಸವ ಸಮಾರಂಭವು ನಾಡಾ ಐಟಿಐ ಕಾಲೇಜಿನಲ್ಲಿ ದಿನಾಂಕ 15-07-2025 ರಂದು ಕಿರಣ್ ಲೋಬೊ ಇವರ ಅಧ್ಯಕ್ಷತೆಯಲ್ಲಿ ನೆರವೇರಿತು
ಈ ಸಂದರ್ಭ ಪಡುಕೋಣೆ ಚರ್ಚಿನ ಧರ್ಮ ಗುರುಗಳಾದ ಫಾದರ್ ಫ್ರಾನ್ಸಿಸ್ ಕರ್ನೆಲಿಯೋ ಮಾತನಾಡಿ ಈ ವರ್ಷ ಶೇಕಡ 100 ಫಲಿತಾಂಶ ಪಡೆದ ವಿದ್ಯಾರ್ಥಿಗಳಿಗೆ ಶುಭವನ್ನ ಹಾರೈಸುತ್ತಾ, ವಿದ್ಯಾರ್ಥಿಗಳು ಕಠಿಣ ಪರಿಶ್ರಮ ಮತ್ತು ನಿಗದಿತ ಗುರಿಯನ್ನು ಇಟ್ಟುಕೊಂಡರೆ ಬದುಕಿನಲ್ಲಿ ಯಶಸ್ಸು ಕೊಂಡುಕೊಳ್ಳಬಹುದು ಎಂದರು. ಉತ್ತೀರ್ಣರಾದ ಎಲ್ಲಾ ವಿದ್ಯಾರ್ಥಿಗಳಿಗೆ ಭಾರತ ಸರಕಾರ ನೀಡುವ ರಾಷ್ಟ್ರೀಯ ವೃತ್ತಿ ಶಿಕ್ಷಣ ಪರಿಷತ್ ಪ್ರಮಾಣ ಪತ್ರವನ್ನು ನೀಡಿ ಶುಭಹಾರೈಸಿದರು
ಈ ಸಂದರ್ಭ ಸಂಸ್ಥೆಯ ಸಾಧಕ ವಿದ್ಯಾರ್ಥಿ ಶ್ರೀ ಗಣೇಶ್ , ಸಂಸ್ಥೆಯ ಕಾರ್ಯದರ್ಶಿ ನವೀನ್ ಲೋಬೋ, ಪ್ರಾಂಶುಪಾಲರಾದ ಮನೋಹರ ಆರ್ ಕಾಮತ್, ಪ್ಲೇಸ್ಮೆಂಟ್ ಆಫೀಸರ್ ರಾಜೇಶ್ ಕೆ. ಸಿ ಉಪಸ್ಥಿತರಿದ್ದರು.
ವಿನಾಯಕ ಕಾಮತ್ ಪ್ರಾರ್ಥನೆಗೈದರು, ದಿನೇಶ್ ಗಾಣಿಗ ಸ್ವಾಗತಿಸಿದರು, ರಾಘವೇಂದ್ರ ಆಚಾರ್ಯ ವಂದನಾರ್ಪಣೆಗೈದರು ಕಿಶೋರ್ ಸಸಿಹಿತ್ಲು ಕಾರ್ಯಕ್ರಮ ನಿರೂಪಿಸಿದರು

