ಬೈಂದೂರು: ಬೈಂದೂರು ಸಾಗರ್ ಕ್ರೆಡಿಟ್ ಕೋ-ಅಪರೇಟಿವ್‌ ಸೊಸೈಟಿಯ 2025-2026 ನೇ ಸಾಲಿನ ವಾರ್ಷಿಕ ಸರ್ವ ಸದಸ್ಯರ ಸಭೆಯು ಪ್ರಧಾನ ಕಛೇರಿಯಲ್ಲಿ ನೆರವೇರಿತು

ಬೈಂದೂರು: ಬೈಂದೂರು ಸಾಗರ್ ಕ್ರೆಡಿಟ್ ಕೋ-ಅಪರೇಟಿವ್‌ ಸೊಸೈಟಿಯ 2025-2026 ನೇ ಸಾಲಿನ ವಾರ್ಷಿಕ ಸರ್ವ ಸದಸ್ಯರ ಸಭೆಯು ಪ್ರಧಾನ ಕಛೇರಿಯಲ್ಲಿ ನೆರವೇರಿತು

ಸಾಗರ್ ಕ್ರೆಡಿಟ್ ಕೋ-ಅಪರೇಟಿವ್‌ ಸೊಸೈಟಿ ಅಧ್ಯಕ್ಷರು ಹಾಗೂ ಮಾಜಿ ಶಾಸಕರು ಆದಂತ ಶ್ರೀ ಕೆ.ಗೋಪಾಲ ಪೂಜಾರಿ ಅವರು ಬೈಂದೂರು ಸಾಗರ್ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿಯ ಪ್ರದಾನ ಕಛೇರಿಯಲ್ಲಿ ನಡೆದ 23ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಸಂಘವು ಎಂಟು ಶಾಖೆಗಳನ್ನು ಹೊಂದಿದ್ದು, ಬೈಂದೂರಿನ ಪ್ರಧಾನ ಕಛೇರಿ ಕಟ್ಟಡ ನಿರ್ಮಾಣಕ್ಕೆ ನಿವೇಶನ ಖರೀದಿಸಲಾಗಿದ್ದು, ಸಂಸ್ಥೆಯು ಬೆಳ್ಳಿ ಹಬ್ಬ ಆಚರಿಸುವ ವೇಳೆಗೆ ಸುಮಾರು 4 ಕೋಟಿ ರೂಪಾಯಿ ವೆಚ್ಚದಲ್ಲಿ ನೂತನ ಸ್ವಂತ ಕಟ್ಟಡದಲ್ಲಿ ಪ್ರಧಾನ ಕಛೇರಿ ಉದ್ಘಾಟನೆಗೊಳ್ಳಲಿದೆ.
ಹಾಗೆಯೆ ಸಂಸ್ಥೆಯ ಆಡಳಿತ ಮಂಡಳಿ ಹಾಗೂ ಸಿಬ್ಬಂಧಿಗಳ ಸಹಕಾರದಿಂದ ಸೊಸೈಟಿ ಇನ್ನಷ್ಟು ಪ್ರಗತಿ ಸಾಧಿಸಿದೆ ಎಂದರು.

ಸೊಸೈಟಿಯು ರೂಪಾಯಿ 379.10 ಕೋಟಿ ವ್ಯವಹಾರ ನಡೆಸಿ, ರೂಪಾಯಿ 61.67 ಲಕ್ಷ ನಿವ್ವಳ ಲಾಭ ಗಳಿಸಿದೆ ಹಾಗೂ ಸಂಘದ ಸದಸ್ಯರಿಗೆ ಶೇ.13% ಡಿವಿಡೆಂಡ್ ಘೋಷಿಸಲಾಗಿದೆ ಎಂದು ಸೊಸೈಟಿ ಅಧ್ಯಕ್ಷರಾದ ಶ್ರೀ ಕೆ. ಗೋಪಾಲ ಪೂಜಾರಿ ಹೇಳಿದರು

ಈ ಸಂದರ್ಭದಲ್ಲಿ ನಿರ್ದೇಶಕರುಗಳಾದ ಎಸ್.ರಾಜು ಪೂಜಾರಿ,ಕೆ.ಶಂಕರ ಪೂಜಾರಿ,ಚಿಕ್ಕು ಪೂಜಾರಿ, ಕಲ್ಪನಾ ಭಾಸ್ಕರ್,ಯು.ಕೇಶವ ಪೂಜಾರಿ,ಕೆ.ಶ್ರೀನಿವಾಸ ಪೂಜಾರಿ,ಜಯಸೂರ್ಯ ಪೂಜಾರಿ,ಶೇಖರ ಪೂಜಾರಿ ನಾಗೂರು,ಉದಯ ಜಿ.ಪೂಜಾರಿ,ವೆಂಕಟೇಶ ಮಾಚ ಪೂಜಾರಿ ಮುಂತಾದವರು ಉಪಸ್ಥಿತರಿದ್ದರು.

URL has been copied successfully!

Discover more from BYNDOOR XPRESS

Subscribe now to keep reading and get access to the full archive.

Continue reading