ಯಕ್ಷಗಾನ ಕಾಲ ಮಿತಿ ಬಗ್ಗೆ ಸಭೆ

ರಾತ್ರಿ ನಡೆಯುವ ಯಕ್ಷಗಾನ ಸೇವೆ ಸಂದರ್ಭದಲ್ಲಿ ಧ್ವನಿವರ್ಧಕ ಬಳಕೆಗೆ ಅನುಮತಿ ನಿರಾಕರಿಸಿ ಪ್ರದರ್ಶನವನ್ನು ಸ್ಥಗಿತಗೊಳಿಸುತ್ತಿರುವಂತಹ ಸಂದರ್ಭಗಳು ಅಲ್ಲಲ್ಲಿ ನಡೆಯುತ್ತಿದೆ.
ಹೀಗಾಗಿ ಬೆಳಿಗ್ಗೆಯ ತನಕ ಪ್ರದರ್ಶನ ನಡೆಸಲು ಸಮಸ್ಯೆ ಆಗುತ್ತಿದ್ದು ಡೇರೆ ಮೇಳ ಹೊರತುಪಡಿಸಿ ಎಲ್ಲ ಬಯಲಾಟ ಮೇಳಗಳು ಒಂದೇ ರೀತಿಯ ಸಮಯವನ್ನು ನಿಗದಿಪಡಿಸಿಕೊಂಡು ಅದರಂತೆ ಪ್ರದರ್ಶನಕ್ಕೆ ಅವಕಾಶಕ್ಕಾಗಿ ಜಿಲ್ಲಾ ಆಡಳಿತ, ಸರಕಾರಕ್ಕೆ ಅವಕಾಶವನ್ನು ಕೋರುವುದಾಗಿ ಎಂದು ಪಿ ಕಿಶನ್ ಹೆಗ್ಡೆ ಸಭೆಯಲ್ಲಿ ಹೇಳಿದರು.
ಹಾಗೆ ಕೋಟದ ಶ್ರೀ ಅಮೃತೇಶ್ವರಿ ಯಕ್ಷಗಾನ ಮೇಳದ ಯಜಮಾನರಾದ ಆನಂದ್ ಸಿ ಕುಂದರ್ ನೇತೃತ್ವದಲ್ಲಿ ಸಭೆಯಲ್ಲಿ ತೀರ್ಮಾನಗಳನ್ನು ಕೈಗೊಳ್ಳಲಾಯಿತು…

ಈ ಸಂದರ್ಭದಲ್ಲಿ ಬೇರೆ ಬೇರೆ ಮೇಳಗಳ ಯಜಮಾನರು ಆದಂತಹ ಮಂದಾರ್ತಿ ಮೇಳದ ಧನಂಜಯ ಶೆಟ್ಟಿ, ಮಾರಣಕಟ್ಟೆ ಮೇಳದ ಸದಾಶಿವ ಶೆಟ್ಟಿ, ರಘುರಾಮ್ ಶೆಟ್ಟಿ, ಅಮೃತೇಶ್ವರಿ ಮೇಳದ ಆನಂದ್ ಸಿ ಕುಂದರ್, ಆಜ್ರಿ ಮೇಳದ ಅಶೋಕ್ ಶೆಟ್ಟಿ, ಗೋಳಿಗರಡಿ ಮೇಳದ ವಿಠಲ್ ಪೂಜಾರಿ, ಹಾಲಾಡಿ ಮೇಳದ ಅಮರನಾಥ್ ಶೆಟ್ಟಿ, ಮಡಾಮಕ್ಕಿ ಮೇಳದ ಶಶಿಧರ್ ಶೆಟ್ಟಿ ಹಾಗೆ ಇನ್ನಿತರರು ಉಪಸ್ಥಿತರಿದ್ದರು.

URL has been copied successfully!

Discover more from BYNDOOR XPRESS

Subscribe now to keep reading and get access to the full archive.

Continue reading