ಚಲಿಸುವ ರೈಲಿನಿಂದ ಇಳಿಯಲು ಹೋಗಿ ಹಳಿಯ ಮಧ್ಯ ಸಿಲುಕುತ್ತಿದ್ದ ಪ್ರಯಾಣಿಕನೊಬ್ಬನನ್ನು ರೈಲ್ವೆ ಸಿಬ್ಬಂದಿ ತಕ್ಷಣ ಕಾರ್ಯಪ್ರವೃತ್ತರಾಗಿ, ರಕ್ಷಿಸಿದ ಘಟನೆ ಮುರುಡೇಶ್ವರ ರೈಲ್ವೆ ನಿಲ್ದಾಣದಲ್ಲಿ ಭಾನುವಾರ ಬೆಳಿಗ್ಗೆ ನಡೆದಿದೆ.

ಕೊಚ್ಚಿವಲಿಯಿಂದ ಗಂಗಾನಗರಕ್ಕೆ ತೆರಳುತ್ತಿದ್ದ ರೈಲಿನಲ್ಲಿ ಮಹಮ್ಮದ್ ಗಫೂರ್ (22) ಎಂಬ ಯುವಕ ಪ್ರಯಾಣಿಸುತ್ತಿದ್ದ. ಮುರುಡೇಶ್ವರ ನಿಲ್ದಾಣದಿಂದ ರೈಲು ಹೊರಟಾಗ ಗಾಬರಿಗೊಂಡ ಯುವಕ ಚಲಿಸುತ್ತಿದ್ದ ರೈಲಿನಿಂದಲೇ ಹೊರಗೆ ಇಳಿಯಲು ಪ್ರಯತ್ನಿಸಿದ್ದಾನೆ, ತಕ್ಷಣ ಸಮಯ ಪ್ರಜ್ಞೆ ಮೆರೆದು ಮಾನವೀಯತೆ ಪ್ರದರ್ಶಿಸಿ ಮುರುಡೇಶ್ವರ ನಿಲ್ದಾಣದ ಪಾಯಿಂಟ್ಸ್ ಮ್ಯಾನ್ ಗಣಪತಿ ನಾಯಕ್ ಇವರು ರಕ್ಷಿಸಿದ್ದಾರೆ.

ಇವರ ಈ ಶ್ಲಾಘನೀಯ ಸೇವೆಯನ್ನು ಗುರುತಿಸಿ ಕೊಂಕಣ ರೈಲ್ವೆ ಚೇರ್ಮನ್ ಹಾಗೂ ಮ್ಯಾನೇಜಿಂಗ್ ಡೈರೆಕ್ಟರ್ ಆದ ಸಂತೋಷ ಕುಮಾರ್ ಝಾ ಅವರು 10,000 ನಗದು ಬಹುಮಾನ ಘೋಷಿಸಿದ್ದಾರೆ.

URL has been copied successfully!

Discover more from BYNDOOR XPRESS

Subscribe now to keep reading and get access to the full archive.

Continue reading