ರೇ.ಫಾ.ರೋಬರ್ಟ್ ಕೈಗಾರಿಕಾ ತರಬೇತಿ ಸಂಸ್ಥೆ ನಾಡಾ( ಐಟಿಐ) ಗೆ 2026-27ನೇ ಸಾಲಿನ ಪ್ರವೇಶಾವಕಾಶ ಬಯಸುವ ಆರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು ಕೆಲವೇ ಸೀಟುಗಳು ಬಾಕಿ ಉಳಿದಿದ್ದು, ಆಸಕ್ತ ವಿದ್ಯಾರ್ಥಿಗಳು ಕೂಡಲೇ ಅರ್ಜಿ ಸಲ್ಲಿಸುವಂತೆ ಕಾಲೇಜಿನ ಆಡಳಿತ ಮಂಡಳಿ ಹಾಗೂ ಪ್ರಾಚಾರ್ಯರ ಜಂಟಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಸಂಸ್ಥೆಯಲ್ಲಿ ದೆಹಲಿಯ ರಾಷ್ಟ್ರೀಯ ವೃತ್ತಿ ಶಿಕ್ಷಣ ಮಂಡಳಿಯಿಂದ ( ಎನ್ಸಿವಿಟಿ ) ಶಾಶ್ವತ ಸಂಯೋಜನೆ ಪಡೆದುಕೊಂಡಿರುವ ಎರಡು ವರ್ಷ ಅವಧಿಯ ಎಲೆಕ್ಟ್ರಾನಿಕ್ಸ್ ಮೆಕ್ಯಾನಿಕ್, ಎಲೆಕ್ನಿಷಿಯನ್, ಮೆಕ್ಯಾನಿಕ್ ಮೋಟಾರ್ ವೆಹಿಕಲ್ (ಎಂಎಂವಿ) ಹ ಹಾಗೂ ಒಂದು ವರ್ಷ ಅವಧಿಯ ಮೆಕ್ಯಾನಿಕ್ ಡಿಸೇಲ್ ಕೋರ್ಸುಗಳಿಗೆ ಎಸ್‌ಎಸ್‌ಎಲ್ಸಿ ಪಾಸಾಗಿರುವ ಅರ್ಹ ಅಭ್ಯರ್ಥಿಗಳಿಗೆ ಪ್ರವೇಶಕ್ಕೆ ಅವಕಾಶವಿದ್ದು, ಪ್ರವೇಶಾವಕಾಶ ಅಪೇಕ್ಷಿಸುವವರು ಸರ್ಕಾರದ ನಿಯಮಾವಳಿಗಳಂತೆ ದಾಖಲೆಗಳೊಂದಿಗೆ ಜು.25 ರ ಒಳಗೆ ಸಂಸ್ಥೆಗೆ ಭೇಟಿ ನೀಡಿ ಅರ್ಜಿ ಸಲ್ಲಿಸಲು ಕೋರಲಾಗಿದೆ.

ಸರ್ಕಾರದ ಮೀಸಲಾತಿಯಂತೆ ಅಭ್ಯರ್ಥಿಗಳಿಗೆ ಪ್ರವೇಶಾವಕಾಶ ನೀಡಲಾಗುವುದು. ತರಬೇತಿಯನ್ನು ಯಶಸ್ವಿಯಾಗಿ ಪೂರೈಸಿರುವ ಅಭ್ಯರ್ಥಿಗಳ ಉದ್ಯೋಗಾವಕಾಶಕ್ಕಾಗಿ ರಾಷ್ಟ್ರೀಯ ಹಾಗೂ ಬಹು ರಾಷ್ಟ್ರೀಯ ಪ್ರಸಿದ್ಧ ಕಂಪೆನಿಗಳ ಒಡಂಬಡಿಕೆಯೊಂದಿಗೆ ಕ್ಯಾಂಪಸ್ ಸಂದರ್ಶನಕ್ಕೂ ಅವಕಾಶ ಕಲ್ಪಿಸಲಾಗುವುದು. ಆಸಕ್ತರು ಖುದ್ದಾಗಿ ಸಂಸ್ಥೆಗೆ ಬ೦ದು ಮಾಹಿತಿ ಪಡೆದುಕೊಳ್ಳಬಹುದು ಅಥವಾ ದೂರವಾಣಿ ಸಂಖ್ಯೆ 9113234392 ನ್ನು ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ಕೋರಲಾಗಿದೆ.

URL has been copied successfully!