ಭಾರತದ ಚುನಾವಣಾ ಆಯೋಗವು ರಾಜ್ಯದಲ್ಲಿ ಇಂದಿನಿಂದ ಒಂದು ತಿಂಗಳ ಕಾಲ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಮಾಡಲಿದೆ. ಈಗಾಗಲೇ ಮ್ಯಾಪಿಂಗ್ ಮುಕ್ತಾಯವಾಗಿದ್ದು ಚುನಾವಣಾ ಅಧಿಕಾರಿಗಳು ಬಿ ಎಲ್ ಓ ಗಳು ಮನೆ ಮನೆಗೆ ಭೇಟಿ ಕೊಡಲಿದ್ದಾರೆ.

ಕರ್ನಾಟಕದಲ್ಲಿ ಸುಮಾರು 91.61% ಮ್ಯಾಪಿಂಗ್ ಆಗಿದ್ದು ಇನ್ನುಳಿದ ಕೆಲವು ಮತದಾರರ ಮ್ಯಾಪಿಂಗ್ ಆಗಬೇಕಿದೆ.

ನಕಲಿ ಮತ್ತು ಅನರ್ಹ ಮತದಾರರನ್ನು ಹಿಡಿದು ಪಟ್ಟಿಯಿಂದ ಡಿಲೀಟ್ ಮಾಡಲಿದೆ. ಬಿ ಎಲ್ ಓ ಗಳು ಮನೆಗೆ ಭೇಟಿ ನೀಡಿ ಎಸ್ಐಆರ್ ಅರ್ಜಿ ನೀಡಲಿದ್ದಾರೆ, ಎಲ್ಲ ಮತದಾರರು ತಮ್ಮ ಪಾಸ್ ಪೋರ್ಟ್ ಅಳತೆಯ ಕಲರ್ ಫೋಟೋ ಹಾಗೂ ಆಧಾರ್ ಕಾರ್ಡ್ ಜೆರಾಕ್ಸ್ ಪ್ರತಿಯನ್ನು ಅಥವಾ ಜನ್ಮ ದಿನಾಂಕ ಯಾವುದಾದರೂ ದೃಢೀಕೃತ ದಾಖಲೆಗಳನ್ನು ಸಿದ್ಧಪಡಿಸಿ ಬಿಎಲ್ಒಗಳಿಗೆ ನೀಡುವುದು.

ಎಸ್ ಐ ಆರ್ ನಲ್ಲಿ ಭಾಗಿಯಾಗಿ ಮಾಹಿತಿ ನೀಡಿದರೆ ಮಾತ್ರ ಮತದಾನದ ಹಕ್ಕು ಇಲ್ಲದೇ ಹೋದರೆ ಮತದಾನದಿಂದ ವಂಚಿತರಾಗುವ ಸಾಧ್ಯತೆ ಇದೆ, ಹಾಗೆ ಅಕ್ಟೋಬರ್ 2026ಕ್ಕೆ 18 ತುಂಬ ಯುವ ಮತದಾರರು ಸಹಿತ ಅರ್ಜಿ ಸಲ್ಲಿಸಬಹುದಾಗಿದೆ.

URL has been copied successfully!

Discover more from BYNDOOR XPRESS

Subscribe now to keep reading and get access to the full archive.

Continue reading