ಸ್ಥಗಿತಗೊಂಡಿರುವ ಸಿದ್ದಾಪುರ ಏತ ನೀರಾವರಿ ಯೋಜನೆ ಪುನರಾರಂಭಿಸುವಂತೆ ಸಂಸದ ಬಿ ವೈ ರಾಘವೇಂದ್ರ ಜಲಸಂಪನ್ಮೂಲ ಸಚಿವ ರಾಮಲಿಂಗ ರೆಡ್ಡಿಗೆ ಮನವಿ ಸಲ್ಲಿಸಿದರು.

ಸಿದ್ದಾಪುರ ಏತ ನೀರಾವರಿ ಯೋಜನೆಯು ತಜ್ಞರ ತಂಡದ ವರದಿ ಆಧಾರದ ಮೇಲೆ ಅನುಮೋದನೆಗೊಂಡು ಕಾರ್ಯಾರಂಭವಾಗಿತ್ತು, ಸದ್ಯ ವಾರಹಿ ನದಿಯಲ್ಲಿ 3000 ಕ್ಯೂಸೆಕ್ಸ್ ನೀರಿನ ಹರಿವಿದ್ದು ಈ ಯೋಜನೆಗೆ ಕೇವಲ 66 ಕ್ಯೂಸೆಕ್ಸ್ ನೀರು ಮಾತ್ರ ಅವಶ್ಯಕತೆ ಇದೆ.

ಇದರಿಂದ ಯಾವುದೇ ಯೋಜನೆಗಳಿಗೂ ತೊಂದರೆಯಾಗದಿದ್ದರೂ ಕೆಲವೊಂದು ತಪ್ಪು ಮಾಹಿತಿ ಯಿಂದ ಕಾಮಗಾರಿಗೆ ತಡೆ ತರಲಾಗಿದೆ ಎಂದು ಅವರು ಸಚಿವರ ಗಮನವನ್ನು ಸೆಳೆದರು.
ಇತ್ತೀಚಿಗೆ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಸಹಿತ ಭೇಟಿ ಮಾಡಿ ಮನವಿ ಸಲ್ಲಿಸಿದ್ದು ಅವರು ಕಾಮಗಾರಿ ಪುನರಾರಂಭಿಸಲು ಆದೇಶಿಸಿದ್ದಾರೆ. ಕರಾವಳಿ ಭಾಗದ ಸುಮಾರು 7 8 ಗ್ರಾಮಗಳ ಸುಮಾರು 1,200 ಹೆಕ್ಟೇರ್ ಕ್ರಷಿ ಭೂಮಿಗೆ ನೀರು ಒದಗಿಸುವ ಈ ಯೋಜನೆ ರೈತರ ಹಿತ ದೃಷ್ಟಿಯಿಂದ ಶೀಘ್ರವಾಗಿ ಪೂರ್ಣಗೊಳಿಸಬೇಕೆಂದು ಮನವಿ ಮಾಡಿಕೊಂಡಿದ್ದರು.

ಮನವಿ ಸ್ವೀಕರಿಸಿದ ಸಚಿವರೂ ಪರಿಶೀಲಿಸಿ ಶೀಘ್ರದಲ್ಲಿ ಸೂಕ್ತ ಕ್ರಮವನ್ನು ತೆಗೆದುಕೊಳ್ಳುವಂತೆ ಭರವಸೆ ನೀಡಿದರು

URL has been copied successfully!