ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಬೈಂದೂರು ಇದರ ನೂತನ ಕಚೇರಿಯ ಉದ್ಘಾಟನಾ ಕಾರ್ಯಕ್ರಮವು ದಿನಾಂಕ 09-05-2026ರಂದು ಬೈಂದೂರಿನ ರೋಟರಿ ಸಮುದಾಯ ಭವನದಲ್ಲಿ ನೆರವೇರಿತು ಸಭಾ ಕಾರ್ಯಕ್ರಮ ಉದ್ಘಾಟಿಸಿ ಸಂಘದ ಆಡಳಿತ ಯೋಜನೆಗಳು ಸಮರ್ಪಕವಾಗಿ ಜನರಿಗೆ ಮುಟ್ಟಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ನೀಡಬೇಕು ಇದರಿಂದ ಸಂಘದ ಗೌರವ ಇನ್ನಷ್ಟು ಹೆಚ್ಚಿಸಲಿದೆ ಎಂದು ಮಾಜಿ ಶಾಸಕ ಶ್ರೀ ಕೆ ಗೋಪಾಲ್ ಪೂಜಾರಿ ಹೇಳಿದರು.
ಈ ಸಂದರ್ಭದಲ್ಲಿ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಅಭಿನಂದಿಸಲಾಯಿತು. ಬಳಿಕ ಬೈಂದೂರು ಗಾಂಧಿ ಮೈದಾನದಲ್ಲಿ ಸರಕಾರಿ ನೌಕರರ ಕ್ರೀಡಾಕೂಟ ನಡೆಯಿತು.

ಬೈಂದೂರು ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ ನಾಯ್ಕ.ಕ.ರಾ.ಪ್ರಾ.ಸರ್ಕಾರಿ ನೌಕರರ ಸಂಘದ ಉಪಾಧ್ಯಕ್ಷ ಅಂಪಾರು ದಿನಕರ ಶೆಟ್ಟಿ,ತಾಲೂಕು ಆರೋಗ್ಯಾಧಿಕಾರಿ,ಡಾ.ಪ್ರೇಮಾನಂದ,ಜಿ.ಪಂ ಮಾಜಿ ಅಧ್ಯಕ್ಷ ಎಸ್.ರಾಜು ಪೂಜಾರಿ,ಬೈಂದೂರು ರೈತ ಸಂಘದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ,ಜಿ.ಪಂ ಮಾಜಿ ಸದಸ್ಯರಾದ ಮದನ್ ಕುಮಾರ್ ಉಪ್ಪುಂದ,ಗೌರಿ ದೇವಾಡಿಗ,ತಾಲೂಕು ಕೆ.ಡಿ.ಪಿ ಸದಸ್ಯ ಶೇಖರ ಪೂಜಾರಿ,ಉದ್ಯಮಿ ಸುರೇಶ ಶೆಟ್ಟಿ ಉಪ್ಪುಂದ,ಬಿ.ಟಿ ಲೋಕೇಶ್,ನಾಗೇಶ,ಅಕ್ಷರ ದಾಸೋಹ ಸಮಿತಿಯ ಚಂದ್ರ ನಾಯ್ಕ,ಬೈಂದೂರು ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ರಾಜೇಶ್,ಎಮ್.ಎಮ್.ಪೌಂಡೇಶನ್ ನ ಅರುಣ್ ಕುಮಾರ್ ಶಿರೂರು,ಕ.ರಾ.ನೌ.ಸಂಘದ ಗೌರವಾಧ್ಯಕ್ಷ ಷರೀಫ್,ಖಜಾಂಚಿ ಉದಯ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.
ಶಿಕ್ಷಕರ ಸಂಘದ ಅಧ್ಯಕ್ಷರಾದ ಶೇಖರ್ ಪೂಜಾರಿ ಪ್ರಾಸ್ತಾವಿಕ ಮಾತುಗಳನ್ನಾಡಿ, ಶಿಕ್ಷಕ ಸುಬ್ರಹ್ಮಣ್ಯ ಜಿ ಉಪ್ಪುಂದ ಕಾರ್ಯಕ್ರಮ ನಿರೂಪಿಸಿ, ಗಣಪತಿ ಹೋಬಳಿದಾರ್ ವಂದಿಸಿದರು.



