ದಿನಾಂಕ 23-04-2026 ರಂದು ಮದ್ಯಾಹ್ನ 15.00 ಗಂಟೆಯಿಂದ ರಾತ್ರಿ 22.00 ಗಂಟೆ ಮದ್ಯಾವಧಿಯಲ್ಲಿ.. ಬೈಂದೂರು ಯಡ್ತರೆ ಗ್ರಾಮದ ಎಸ್. ಬಿ, ಐ, ಬ್ಯಾಂಕ್ ಹಿಂಭಾಗದಲಿ ರಾಜಸ್ತಾನ್ ಮೂಲದ ರಾವಲ್ ಸಿಂಗ್ ಎಂಬವರು ವಾಸವಾಗಿದ್ದ ಬಾಡಿಗೆ ಮನೆಯಲಿ ಯಾರು ಇಲ್ಲದ ಸಮಯ ಮನೆಯ ಎದುರಿನ ಬಾಗಿಲಿನ ಬೀಗವನ್ನು ಮುರಿದು ಮನೆಯೊಳಗಿನ ಗೋದ್ರೇಜ್‌ನಲ್ಲಿ ಇರಿಸಿದ್ದ 6 ಲಕ್ಷ ನಗದು ಹಣವನ್ನು ಕಳವು ಮಾಡಿದ್ದು ಈ ಬಗ್ಗೆ, ಬೈಂದೂರು ಪೊಲೀಸ್ ಠಾಣೆಯಲ್ಲಿ ಅ.ಕ್ರ. 41/2026 5 ಕಲಂ 331 (3) 331 (4) 305 BNS ರಂತೆ ಪ್ರಕರಣವು ದಾಖಲಾಗಿರುತ್ತದೆ.
ಈ ಪ್ರಕರಣದ ತನಿಖೆಯನ್ನು ಬೈಂದೂರು ವೃತ್ತ ನಿರೀಕ್ಷಕರಾದ ಶಿವಕುಮಾರ್ ಜಿ. ರವರು ನಡೆಸುತ್ತಿದ್ದು, ಈ ಕೃತ್ಯದಲ್ಲಿ., ಭಾಗಿಯಾದ ಮಹೇಂದ್ರ ಸೈನ್ ಪ್ರಾಯ:23 ವರ್ಷ, ತಂದೆ: ನಕತ್ ರಾಮ್ ವಾಸ:ರಾಣಿ ಬಟಾನಿ ಮಂದಿರ ಸಮೀಪ ಸೇತ್ರಾವ್ ಅಂಚೆ, ಸಿರಿಗ್ರಾತ್ ತಾಲೂಕು, ಜೋದ್ಭುರ್ (ಪಡೋತಿ)ಜಿಲ್ಲೆ.., ರಾಜಸ್ಥಾನ ರಾಜ್ಯ ಹಾಲಿ ವಾಸ ಬೈಂದೂರು ಬಂಕೇಶ್ವರದ ಡಿಸ್ ಪ್ರೈ, ಬಟ್ಟೆ ಅಂಗಡಿಯ ಹಿಂದುಗಡೆ ಇರುವ ಸ್ಟೀಪನ್ ರವರ ಬಾಡಿಗೆ ಮನೆ. ಈತನ ಪತ್ತೆಗಾಗಿ ಬೈಂದೂರು ಪಿ.ಎಸ್‌ಐ, ಮತ್ತು ಸಿಬ್ಬಂದಿಯವರನ್ನೊಳಗೊಂಡ ವಿಶೇಷ ತಂಡವನ್ನು ರಚಿಸಿದ್ದು ಈ ವಿಶೇಷ ತಂಡವು ತಾಂತ್ರಿಕ ವಿಧಾನ ಹಾಗೂ ಸ್ಥಳೀಯ ಬಾತ್ಮೀದಾರರ ಸಹಕಾರದೊಂದಿಗೆ ದಿನಾಂಕ 07.05.2026 ರಂದು ಆರೋಪಿಯನ್ನು ಪತ್ತೆ ಮಾಡಿ ಬಂಧಿಸಿ, ಆತನು ಕಳವು ಮಾಡಿರುವ ರೂ 6 ಲಕ್ಷ ನಗದನ್ನು ಸ್ವಾಧೀನಪಡಿಸಿಕೊಂಡಿರುವುದಾಗಿದೆ.
ಈ ಕಾರ್ಯಾಚರಣೆಯನ್ನು ಮಾನ್ಯ ಉಡುಪಿ ಜಿಲ್ಲೆಯ ಪೊಲೀಸ್ ಅಧೀಕ್ಷಕರಾದ ಶ್ರೀ ಹರಿರಾಂ ಶಂಕರ್ ಐ.ಪಿ.ಎಸ್. ರವರ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ ಸುಧಾಕರ ನಾಯ್ಕ ಉಡುಪಿ ಜಿಲ್ಲೆ ರವರ ನಿರ್ದೇಶನದಂತೆ ಮತ್ತು ಶ್ರೀ ಹೆಚ್.ಡಿ. ಕುಲಕರ್ಣಿ ಪೊಲೀಸ್ ಉಪಾಧೀಕ್ಷಕರು ಕುಂದಾಪುರ ಉಪವಿಭಾಗರವರ ಮಾರ್ಗದರ್ಶನದಲ್ಲಿ ನಡೆಸಲಾಗಿರುತ್ತದೆ.
ಈ ಕಾರ್ಯಾಚರಣೆಯನ್ನು ಶಿವಕುಮಾರ್ ಬಿ. ಸಿಪಿಐ ಬೈಂದೂರುರವರ ನೇತೃತ್ವದಲ್ಲಿ ನಡೆಸಿದ್ದು ಕಾರ್ಯಾಚರಣೆಯಲ್ಲಿ ಬೈಂದೂರು ಪೊಲೀಸ್ ಠಾಣೆಯ ಪಿ.ಎಸ್.ಐ ರವರಾದ ಸುನೀಲ್ ಕುಮಾರ್, ಬಿ.ವೈ ಮತ್ತು ನವೀನ ಬೋರಕರ, ಹಾಗೂ ಬೈಂದೂರು ಪೊಲೀಸ್ ಠಾಣೆಯ ಸಿಬ್ಬಂದಿಯವರಾದ ಸಂತೋಷ ಕುಮಾರ ಯು. ಚಿದಾನಂದ, ಜಯರಾಮ, ಮಾಳಪ್ಪ ದೇಸಾಯಿ, ಪರಯ್ಯ ಮಠಪತಿ ಹಾಗೂ ಬೈಂದೂರು ವೃತ್ತ ಕಛೇರಿ ಸಿಬ್ಬಂದಿಯವರಾದ ಶಿವಾನಂದ ಹುದ್ದಾರ ಅಶೋಕ ರಾಠೋಡ ಮತ್ತು ಉಡುಪಿ ಜಿಲ್ಲಾ ಪೊಲೀಸ್ ಕಛೇರಿ ಸಿಡಿಆರ್ ವಿಭಾಗದ ಸಿಬ್ಬಂದಿ ದಿನೇಶ್ ರವರು ಸಹಕರಿಸಿರುತ್ತಾರೆ.

