ಬೀಗ ಹಾಕಿದ ಮನೆಗಳ ರಕ್ಷಣೆಗೆ ಪೊಲೀಸರ ‘ಲಾಕ್ಡ್ ಹೌಸ್ ಬೀಟ್ ಸಿಸ್ಟಮ್’ (LHBS) ಆರಂಭ : ಉಡುಪಿ ಜಿಲ್ಲಾ ಪೊಲೀಸ್

ಉಡುಪಿ ಜಿಲ್ಲಾ ಪೊಲೀಸ್ ಲಾಕ್ಡ್ ಹೌಸ್ ಬೀಟ್ ಸಿಸ್ಟಮ್ ಎನ್ನುವ ಹೊಸ ಸೇವೆಯನ್ನು ಪರಿಚಯಿಸುತ್ತಿದೆ. ಈ ಸೇವೆಯ ಉದ್ದೇಶ ಯಾರೇ ಮನೆಯಿಂದ ದೂರವಿದ್ದಾಗ ನಿಮ್ಮ ಮನೆಯನ್ನು ಪೋಲೀಸ್ ಬೀಟ್ ಸಿಬ್ಬಂದಿ ಮೇಲ್ವಿಚಾರಣೆ ಮಾಡುತ್ತಾರೆ. ಈ ಸೇವೆಯನ್ನು ಪಡೆಯಲು ನಿಯಂತ್ರಣ ಕೊಠಡಿಯ ಅಧಿಕೃತ ಸಂಖ್ಯೆಗೆ ಕರೆ ಮಾಡಿ 0820-2526709 ಮತ್ತು ಈ ಸೇವೆಯನ್ನು ಪಡೆಯಲು ಬಯಸುತ್ತೀರಿ ಎಂದು ಖಚಿತಪಡಿಸಿಕೊಳ್ಳಬೇಕು ಹಾಗೆ ನಿಯಂತ್ರಣ ಕೊಠಡಿಯ ಇಂದ ನಿಮಗೆ ಅಧಿಕೃತ ವಾಟ್ಸಪ್ ಸಂಖ್ಯೆಯನ್ನು ನೀಡಲಾಗುತ್ತದೆ ಆ ಸಂಖ್ಯೆಗೆ ನೀವು ಹೋಗುವ ಮತ್ತು ಹಿಂದಿರುಗುವ ದಿನಾಂಕ ಮತ್ತು ಸಮಯ, ನಿಮ್ಮ ಮನೆಯ ವಿಳಾಸ ಮತ್ತು ನಿಮ್ಮ ಮನೆಯ ಮುಂದೆ ತೆಗೆದ ಸೆಲ್ಫಿ ಅನ್ನು ಹಂಚಿಕೊಳ್ಳಬೇಕು.
ಈ ಸೇವೆಯು ವೈಯಕ್ತಿಕ ಮನೆಗಳಿಗೆ ಮಾತ್ರ ಲಭ್ಯವಿದೆ, ಬಹುಮಹಡಿ ಫ್ಲಾಟ್ ಗಳಿಗೆ ಲಭ್ಯವಿಲ್ಲ.
ಯಾವುದೇ ಅನಧಿಕೃತ ಸಂಖ್ಯೆಗಳೊಂದಿಗೆ ಮಾಹಿತಿಯನ್ನು ಹಂಚಿಕೊಳ್ಳದಂತೆ ವಿನಂತಿಸಲಾಗಿದೆ.

Copy link
URL has been copied successfully!

Discover more from BYNDOOR XPRESS

Subscribe now to keep reading and get access to the full archive.

Continue reading