ಬೈಂದೂರು: ಅಂತರಾಷ್ಟ್ರೀಯ ಕಾರ್ಮಿಕ ದಿನಾಚರಣೆಯ ಅಂಗವಾಗಿ, ಜೆಸಿಐ ಬೈಂದೂರು ಸಿಟಿ ಘಟಕದ ವತಿಯಿಂದ ಸಮಾಜದ ನಿಸ್ವಾರ್ಥ ಸೇವಕ, ದಿನಗೂಲಿ ಕಾರ್ಮಿಕರಾದ ಶ್ರೀ ಲಕ್ಷ್ಮಣ್ ಮೊಗವೀರ ಅವರನ್ನು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು.
​ಶ್ರೀ ಲಕ್ಷ್ಮಣ್ ಮೊಗವೀರಾ ಅವರು ವೃತ್ತಿಯಿಂದ ದಿನಗೂಲಿ ಕಾರ್ಮಿಕರಾಗಿದ್ದರೂ, ಪ್ರವೃತ್ತಿಯಲ್ಲಿ ಅಪ್ಪಟ ಸಮಾಜ ಸೇವಕರು. ಕೇವಲ ಕೆಲಸಕ್ಕೆ ಮಾತ್ರ ಸೀಮಿತವಾಗದೆ, ಊರಿನ ಯಾವುದೇ ದೇವಸ್ಥಾನಗಳ ಧಾರ್ಮಿಕ ಕಾರ್ಯಕ್ರಮಗಳು, ಭಜನಾ ಸಂಜೆಗಳು, ಅದ್ಧೂರಿ ರಥೋತ್ಸವಗಳು ಹಾಗೂ ಸಾರ್ವಜನಿಕ ಸಮಾರಂಭಗಳಲ್ಲಿ ಅವರು ಮುಂಚೂಣಿಯಲ್ಲಿ ನಿಂತು ಸೇವೆ ಸಲ್ಲಿಸುತ್ತ ಬಂದಿದ್ದಾರೆ.
​ಸೇವೆಯೇ ಮಂತ್ರ: ಯಾವುದೇ ಫಲಾಪೇಕ್ಷೆಯಿಲ್ಲದೆ, ಆಯಾಸವನ್ನು ಲೆಕ್ಕಿಸದೆ ತಮ್ಮನ್ನು ತಾವು ಸಾರ್ವಜನಿಕ ಸೇವೆಗಾಗಿ ಅರ್ಪಿಸಿಕೊಂಡಿರುವ ಇವರ ಕಾರ್ಯವೈಖರಿ ಎಲ್ಲರಿಗೂ ಮಾದರಿಯಾಗಿದೆ. ಇವರ ಈ ಧನಿವರಿಯದ ಸೇವೆಯನ್ನು ಗುರುತಿಸಿ, ಜೆಸಿಐ ಬೈಂದೂರು ಸಿಟಿ ಘಟಕವು ಈ ಸಾಲಿನ ಕಾರ್ಮಿಕ ದಿನಾಚರಣೆಯಂದು ಸನ್ಮಾನದ ಮೂಲಕ ಅವರಿಗೆ ಗೌರವ ಸಲ್ಲಿಸಿತು.


​ಈ ಸಂದರ್ಭದಲ್ಲಿ ಜೆಸಿಐ ಬೈಂದೂರು ಸಿಟಿಯ ಅಧ್ಯಕ್ಷರಾದ JC HGF ಚೈತ್ರ ಸತೀಶ್ , JC HGF ರಾಜು ಮೊಗವೀರ ನಿಕಟಪೂರ್ವ ಅಧ್ಯಕ್ಷರು, JC HGF ಪ್ರೇಮ ವಿ. ಶೆಟ್ಟಿ ಕಾರ್ಯದರ್ಶಿಗಳು , ಜೆಸಿ ಕೋ-ಆರ್ಡಿನೇಟರ್ ಜೆಸಿ ಸೂರ್ಯಕಾಂತಿ, ಜೆಸಿ ರಾಘವೇಂದ್ರ ಹೊಳ್ಳ, ಜೆಸಿ ಸುರೇಂದ್ರ ಶೇಟ್, ಜೆಸಿ ಅವಿನಾಶ್, ಜೆಸಿ ಹುಲಿಯಪ್ಪ ಗೌಡ, ಜೆಸಿ ರಾಘವೇಂದ್ರ ಸುರ್ಕುಂದ
ಉಪಸ್ಥಿತರಿದ್ದರು.

URL has been copied successfully!

Discover more from BYNDOOR XPRESS

Subscribe now to keep reading and get access to the full archive.

Continue reading