ಮ್ಯೂಸಿಕಲ್ ಪಬ್ಲಿಸಿಟಿ ಬೈಂದೂರು ವತಿಯಿಂದ ಬೈಂದೂರು ಜಾತ್ರೆಯ ಪ್ರಯುಕ್ತ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮ ಬೈಂದೂರು ಶಾರದಾ ವೇದಿಕೆಯಲ್ಲಿ ನಡೆಯಿತು.

ಚಂಡೆ ವಾದ್ಯದೊಂದಿಗೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಆಧ್ಯಾತ್ಮಿಕ ಚಿಂತಕ ವಸಂತನಾಥ್ ಗುರೂಜಿ ನಾಗೂರು ಅವರು, ಜಾತ್ರೆಗಳು ಕೇವಲ ಧಾರ್ಮಿಕ ಆಚರಣೆಗಳಲ್ಲ ಅವು ನಮ್ಮ ಸಂಸ್ಕೃತಿ ಮತ್ತು ಬಾಂಧವ್ಯದ ಜೊತೆಗೆ ಪ್ರೀತಿಯ ನಂಟು ಬೆಸೆಯುವ ಕೊಂಡಿಗಳು. ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರತಿಭೆಗಳಿಗೆ ವೇದಿಕೆ ನೀಡುವುದರ ಜತೆಗೆ ಜನರಲ್ಲಿ ಸಂತೋಷ ಮತ್ತು ಐಕ್ಯತೆಯನ್ನು ಮೂಡಿಸುತ್ತವೆ ಎಂದರು.

ಮುಖ್ಯ ಅತಿಥಿಗಳಾಗಿ ಕಾವೂರು ಆರಕ್ಷಕ ಠಾಣೆಯ ವೃತ್ತ ನಿರೀಕ್ಷಕ ರಾಘವೇಂದ್ರ ಬೈಂದೂರು, ಬೈಂದೂರು ಸೇನೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಗಿರೀಶ್ ಬೈಂದೂರು, ಜಿ.ಪಂ. ಮಾಜಿ ಅಧ್ಯಕ್ಷಎಸ್‌. ರಾಜು ಪೂಜಾರಿ, ಸಹಾಯಕ ಆಯುಕ್ತ ಸತೀಶ್ ಬಟವಾಡಿ, ಶ್ರೇಯಾ ಮರವಂತೆ ಉಪಸ್ಥಿತರಿದ್ದರು.

ಉದ್ಯಮಿ ಜಯಾನಂದ ಹೋಬಳಿದಾರ್, ದಿನಕರ ಪಟ್ಬಾಲ್ ಹಾಗೂ ಶಿಖಾ ಬಿಜೂರು ಅವರನ್ನು ಸಂಸ್ಥೆಯ ವತಿಯಿಂದ ಸಮ್ಮಾನಿಸಲಾಯಿತು.

ಮಾಣಿಕ್ಯ ಹೋಬಳಿದಾರ್ ಪ್ರಾಸ್ತಾ ವಿಕ ಮಾತುಗಳನ್ನಾಡಿದರು. ಸಂಸ್ಥೆಯ ಮುಖ್ಯಸ್ಥ ಸುಶಾಂತ್ ಬೈಂದೂರು ಸ್ವಾಗತಿಸಿ, ಕಿಶೋರ್ ಸಸಿಹಿತ್ತು ನಿರೂಪಿಸಿ, ಕಿರಣ್ ಬಿಜೂರು ವಂದಿಸಿದರು.

URL has been copied successfully!

Discover more from BYNDOOR XPRESS

Subscribe now to keep reading and get access to the full archive.

Continue reading