ಉಡುಪಿ ಜಿಲ್ಲೆಯ ಬೈಂದೂರು ಪೊಲೀಸ್ ಠಾಣೆಯ ರೌಡಿಶೀಟರ್ ಕುಖ್ಯಾತ ಗರುಡ ಗ್ಯಾಂಗನ ಸಕ್ರಿಯ ಸದಸ್ಯ ಮಹಮ್ಮದ್ ಅಲ್ಫಾಜ್ (25)ನನ್ನು ಗೂಂಡಾ ಕಾಯ್ದೆಯಡಿ ಬಂಧಿಸುವಂತೆ ಆದೇಶ ಹೊರಡಿಸಲಾಗಿದೆ.

ಉಡುಪಿ ಜಿಲ್ಲೆ ಪೊಲೀಸ್ ಅಧೀಕ್ಷಕರು ಸಲ್ಲಿಸಿದ ವರದಿ ಆಧಾರದ ಮೇಲೆ, ಜಿಲ್ಲಾ ದಂಡಾಧಿಕಾರಿಯವರು ಆಗಿರುವ ಜಿಲ್ಲಾಧಿಕಾರಿಗಳು ದಿನಾಂಕ 24.04.2026ರಂದು ಈ ಸಂಬಂಧ ಆದೇಶ ಜಾರಿಗೊಳಿಸಿದ್ದಾರೆ.

ಹಾಸನ ವಿರುದ್ಧ ಉಡುಪಿ ಜಿಲ್ಲೆಯ ಹಲವು ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದ್ದು ಅಲ್ಲದೆ ನೆರೆಯ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ನಗರ ಠಾಣೆಯಲ್ಲೂ ಪ್ರಕರಣ ದಾಖಲಾಗಿದೆ.

ಕೊಲೆಯತ್ನ ದರೋಡೆ ದರೋಡೆ ಯತ್ನ ಹಲ್ಲೆ ಅಕ್ರಮ ಕೂಟ ಅಪಹರಣ ಮಾದಕ ವಸ್ತು ಮಾರಾಟ ಹಾಗೂ ಇತರೆ ಒಟ್ಟು 10 ಪ್ರಕರಣಗಳು ಸೇರಿದ್ದು, ಒಂದು ಪ್ರಕರಣ ಕುಲಾಸಿಯಾಗಿದ್ದು ಇನ್ನೊಂದು ಪ್ರಕರಣ ತನಿಖೆಯಲ್ಲಿ ಇದ್ದು 8 ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದೆ.

ಬಂದಿತ ಆರೋಪಿಯು ಕಿರವಂಜೇಶ್ವರ ಗ್ರಾಮದ ಜನತಾ ಕಾಲೋನಿ ಅರೆಹೊಳೆ ಕ್ರಾಸ್ ಮೂಲ ನಿವಾಸಿಯಾಗಿದ್ದು ಪ್ರಸ್ತುತ ಕುಂದಾಪುರದ ಸಿದ್ದನಾಯಕನ ರಸ್ತೆ ರಾಮಮಂದಿರದ ಬಳಿಯಲ್ಲಿ ವಾಸವಾಗಿದ್ದಾನೆ.

ಬಂಧಿತ ಆರೋಪಿಯನ್ನು ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿ ಬಂಧನದಲ್ಲಿರಿಸಲು ಅಧಿಕಾರಿಗಳು ಆದೇಶಿಸಿದ್ದಾರೆ.

URL has been copied successfully!

Discover more from BYNDOOR XPRESS

Subscribe now to keep reading and get access to the full archive.

Continue reading