ಚಾತುರ್ಮಾಸದಂತ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸುದೇ ನಮ್ಮ ಸೌಭಾಗ್ಯ : ಸಚಿವ ಮಂಕಾಳ ವೈದ್ಯ

ಗೋಳಿಹೊಳೆ: ಧರ್ಮಸ್ಥಳ ಸಮೀಪದ ಕನ್ಯಾಡಿ ಶ್ರೀರಾಮ ಕ್ಷೇತ್ರದ, ಮಹಾಮಂಡಲೇಶ್ವರ 1008 ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿಜೀ ಮಹಾರಾಜರ ನೇತೃತ್ವದಲ್ಲಿ ಚಾತುರ್ಮಾಸ್ಯ ವ್ರತಾಚರಣೆಯ ಪೂರ್ವಭಾವಿ ಸಭೆಯು ದಿನಾಂಕ 20-04-2026ರಂದು ಬೈಂದೂರು ತಾಲೂಕು ಗೋಳಿಹೊಳೆ ಶ್ರೀ ವಿನಾಯಕ ದೇವಸ್ಥಾನದಲ್ಲಿಯಲ್ಲಿ ಜರಗಿತು
ಸ್ವಾಮೀಜಿಗಳು ಮಾತನಾಡಿ ಚಾತುರ್ಮಾಸ್ಯ ಇದು ಧಾರ್ಮಿಕ, ಸಾಂಸ್ಕೃತಿಕ ಮತ್ತು ಆತ್ಮೀಕ ಚಿಂತನೆಗಳೊಂದಿಗೆ ನಡೆಯುವ ಭಕ್ತಿಪೂರ್ಣ ಕಾರ್ಯಕ್ರಮವಾಗಿದೆ.ಧರ್ಮ ಜಾಗೃತಿ,ಆಧ್ಯಾತ್ಮಿಕ ಚಿಂತನೆಗಳು ಮತ್ತು ಪರಿಸರ ಧನಾತ್ಮಕ ಕ್ರಿಯೆಗಳ ಮೂಲಕ ಧರ್ಮ ಜಾಗೃತಿಯನ್ನು ಈ ಅವಧಿಯಲ್ಲಿ ನಡೆಸಲಾಗುತ್ತದೆ. ಧಾರ್ಮಿಕ ಶಿಸ್ತು, ಜ್ಞಾನಾರ್ಜನೆ ಮತ್ತು ಸಂಪ್ರದಾಯದ ಉಳಿವಿಗೆ ಒತ್ತು ನೀಡಲಾಗುತ್ತದೆ ಎಂದರು.


ಪೂರ್ವ ಭಾವಿ ಸಭೆಯಲ್ಲಿ ಮೀನುಗಾರಿಕಾ ಸಚಿವ ಮಂಕಾಳ ವೈದ್ಯ ಮಾತನಾಡಿ ಚಾತುರ್ಮಾಸದಂತ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸುದೇ ನಮ್ಮ ಸೌಭಾಗ್ಯ ಇದರಲ್ಲಿ ಯಾವುದೇ ರಾಜಕೀಯ ಇಲ್ಲ, ಮೇಲು ಕೇಳು ಇಲ್ಲ ಸರ್ವರನ್ನು ಜೊತೆಗೂಡಿ ಈ ಚಾತುರ್ಮಾಸ ಕಾರ್ಯಕ್ರಮದಲ್ಲಿ ಗುರುಗಳ ಆಶೀರ್ವಾದ ಪಡೆಯಬೇಕು ಎಂದರು
ಕಾರ್ಯಕ್ರಮದಲ್ಲಿ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ,ಮಾಜಿ ಶಾಸಕ ಗೋಪಾಲ ಪೂಜಾರಿ ಕುಂದಾಪುರ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಅಶೋಕ್ ಪೂಜಾರಿ,
ಉದ್ಯಮಿ ಗೋವಿಂದ ಬಾಬು ಪೂಜಾರಿ ಬೈಂದೂರು ತಾಲೂಕು ಸಂಘದ ಅಧ್ಯಕ್ಷ ಗಣೇಶ್ ಹೊಸ್ಕೊಟೆ,ಶಿವರಾಜ್ ಪೂಜಾರಿ ,ಶೇಖರ ಪೂಜಾರಿ,ನರಸಿಂಹ ಪೂಜಾರಿ
ರಾಜು ಪೂಜಾರಿ ,ಶಿವರಾಜ್ ಪೂಜಾರಿ ಇತರರು ಉಪಸ್ಥಿತರಿದ್ದರು.

URL has been copied successfully!

Discover more from BYNDOOR XPRESS

Subscribe now to keep reading and get access to the full archive.

Continue reading