ಖ್ಯಾತ ಗಾಯಕರು, ಜಾನಪದ ಕಲಾವಿದರು ಮತ್ತು ಕನ್ನಡ ಜಾನಪದ ಪರಿಷತ್ ಉಡುಪಿ ಜಿಲ್ಲಾಧ್ಯಕ್ಷರು ಆದ ಡಾ. ಗಣೇಶ್ ಗಂಗೊಳ್ಳಿ (62) ಏಪ್ರಿಲ್ 7 ಮಂಗಳವಾರ ನಿಧನರಾದರು.
ಕಳೆದ ಹಲವಾರು ವರ್ಷಗಳಿಂದ ಜಾನಪದ ಕ್ಷೇತ್ರದಲ್ಲಿ ಅದು ಸಂಗೀತ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಾ ಬಂದಿರುವರು. ಇವರಿಗೆ ಡಾಕ್ಟರೇಟ್, ಖಿದ್ಮಾ ಸೇವಾರತ್ನ ರಾಜ್ಯ ಪ್ರಶಸ್ತಿ ಸೇರಿ ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.
ಗಂಗೊಳ್ಳಿ ಸಮೀಪದ ಬಾವಿಕಟ್ಟೆ ನಿವಾಸಿ ಆಗಿರುವ ಗಣೇಶ್ ಗಂಗೊಳ್ಳಿ ಅವರು ಪತ್ನಿ ಪುತ್ರ ಪುತ್ರಿಯನ್ನು ಅಗಲಿದ್ದಾರೆ.

