ಬೈಂದೂರು ತಾಲೂಕು ಮಟ್ಟದ ಕಬಡ್ಡಿ ಪಂದ್ಯಾಟ ಸಂಪನ್ನ

ಬೈಂದೂರು ಅಡಿಗದ್ದೆ ಬಾಡದಲ್ಲಿ ಶ್ರೀ ರಕ್ತೇಶ್ವರಿ ಮತ್ತು ಶ್ರೀ ಜೈನಜಟ್ಟಿಗೇಶ್ವರ ಭಕ್ತ ಸಮೂಹ ಬಾಡ, ಬ್ರಾಹ್ಮಿ ಕನ್ಸ್ಟ್ರಕ್ಷನ್ ಮಯ್ಯಾಡಿ ಬೈಂದೂರು, ಮತ್ತು ಅಮ್ಮ ವಾರಿಯರ್ಸ್ ಇವರ ಜಂಟಿ ಆಶ್ರಯದಲ್ಲಿ ಬೈಂದೂರು ತಾಲೂಕು ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಇವರ ಸಹಕಾರದೊಂದಿಗೆ ಏಪ್ರಿಲ್ 4ರಂದು ನಡೆದ R J B A ಟ್ರೋಪಿ 2026 ರ ಪಂದ್ಯಾಟ ಅದ್ದೂರಿಯಿಂದ ಜರುಗಿದೆ.

ಸಭಾ ಕಾರ್ಯಕ್ರಮದಲ್ಲಿ ವೆಂಕಟರಮಣ ಮತ್ತು ಮಕ್ಕಳು ಬೆಳಗಿನ ಮನೆ ಬಾಡಾ, ಶಂಕರ ತುಂಬಿಗದ್ದೆ ಮನೆ ಅಧ್ಯಕ್ಷರು ಶ್ರೀ ರಕ್ತೇಶ್ವರಿ ಮತ್ತು ಜೈನಜಟ್ಟಿಗೇಶ್ವರ ಫ್ರೆಂಡ್ಸ್ ಬಾಡ, ಡಿ ಶಂಕರ್ ನಿವೃತ್ತ ಪೊಲೀಸ್, ಉಮೇಶ್ ಬಿ ಕಾವೇರಿ ಮಾರ್ಗ ಬೆಳಗಿನ ಮನೆ ಬೈಂದೂರು, ಮಂಜೂಷ ಕೆ ಗುತ್ತಿಗೆದಾರರು ಬ್ರಾಹ್ಮಿ ಕನ್ಸ್ಟ್ರಕ್ಷನ್ ಮಯ್ಯಾಡಿ ಬೈಂದೂರು, ನಾಗೇಶ್ ಕ್ಯಾಮರ್ಸನ ಮನೆ ಬಾಡ, ಶರತ್ ಶೆಟ್ಟಿ ಅಧ್ಯಕ್ಷರು ಬೈಂದೂರು ತಾಲೂಕು ಅಮೆಚೂರ್ ಕಬಡ್ಡಿ ಅಸೋಸಿಯೇಷನ್, ಮಾಲಿನಿ ಕೆ ಮಾಜಿ ಉಪಾಧ್ಯಕ್ಷರು ತಾಲೂಕು ಪಂಚಾಯತ್ ಬೈಂದೂರು, ಭಾಗೀರಥಿ ಮಾಜಿ ಅಧ್ಯಕ್ಷರು ಗ್ರಾಮ ಪಂಚಾಯತ್ ಬೈಂದೂರು, ಕಿಶೋರ್ ಪೂಜಾರಿ ಪ್ರಧಾನ ಕಾರ್ಯದರ್ಶಿ ಬೈಂದೂರು ತಾಲೂಕು ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಉಪಸ್ಥಿತರಿದ್ದರು. ಕಿರಣ ಬಿಜೂರು ಕಾರ್ಯಕ್ರಮ ನಿರ್ವಹಿಸಿ, ಮಂಜೂಷ್ ಮಯ್ಯಾಡಿ ಸ್ವಾಗತಿಸಿ, ಕಿಶೋರ್ ಸಸಿಹಿತ್ಲು ವಂದನೆಗೈದರು.

30 ವರ್ಷದೊಳಗಿನ ಪಂದ್ಯಾಟದಲ್ಲಿ ಅಮ್ಮ ವಾರಿಯರ್ಸ್ A ತಂಡ ಪ್ರಥಮ, ಅಮ್ಮ ವಾರಿಯರ್ಸ್ ಬಿ ತಂಡ ದ್ವಿತೀಯ ಸ್ಥಾನ, ದುರ್ಗಾಪರಮೇಶ್ವರಿ ಫ್ರೆಂಡ್ಸ್ ಹೊಸೂರು ತ್ರತಿಯ ಸ್ಥಾನ ಮತ್ತು ಮದ್ದುಗುಡ್ಡೆ ಫ್ರೆಂಡ್ಸ್ ಕುಂದಾಪುರ ಚತುರ್ಥ ಸ್ಥಾನವನ್ನು ಪಡೆದಿರುತ್ತಾರೆ.

ಹಾಗೆ 30 ವರ್ಷ ಮೇಲ್ಪಟ್ಟು ನಡೆದ ಪಂದ್ಯಾವಳಿಯಲ್ಲಿ ರೋಯಲ್ಸ್ ಕಲ್ಮಕ್ಕಿ ಪ್ರಥಮ, ಮಹಾಸತಿ ಶಿರೂರು ದ್ವಿತೀಯ, ಫ್ರೆಂಡ್ಸ್ ಕುಂದಾಪುರ ತೃತೀಯ ಹಾಗೆ ಕೀರ್ತಿ ಯೋಜನಾ ನಗರ ಚತುರ್ಥ ಸ್ಥಾನವನ್ನು ಪಡೆದಿರುತ್ತಾರೆ.

URL has been copied successfully!

Discover more from BYNDOOR XPRESS

Subscribe now to keep reading and get access to the full archive.

Continue reading