ಏಪ್ರಿಲ್ 4 ರಂದು ಬೈಂದೂರಿನಲ್ಲಿ ತಾಲೂಕು ಮಟ್ಟದ ಕಬಡ್ಡಿ ಪಂದ್ಯಾಟ

ಬೈಂದೂರು: ಶ್ರೀ ರಕ್ತೇಶ್ವರಿ ಮತ್ತು ಶ್ರೀ ಜೈನ ಜಟ್ಟಿಗೇಶ್ವರ ಭಕ್ತ ಸಮೂಹ ಬಾಡ, ಬ್ರಾಹ್ಮಿ ಕನ್ ಸ್ಟ್ರಕ್ಷನ್ ಮಯ್ಯಾಡಿ ಬೈಂದೂರು ಮತ್ತು ಅಮ್ಮ ವಾರಿಯರ್ಸ್ ಇವರ ಜಂಟಿ ಆಶ್ರಯದಲ್ಲಿ ಬೈಂದೂರು ತಾಲೂಕು ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಇವರ ಸಹಕಾರದೊಂದಿಗೆ 30 ವರ್ಷ ಒಳಗಿನ ಹಾಗೂ 30 ವರ್ಷ ಮೇಲ್ಪಟ್ಟು ಎರಡು ವಿಭಾಗದಲ್ಲಿ ಕಬ್ಬಡಿ ಪಂದ್ಯಾಟ ಏಪ್ರಿಲ್ 4 ರಂದು ಸಂಜೆ 4 ರಿಂದ ಅಡಿಗದ್ದೆ ಬಾಡದಲ್ಲಿ ಜರುಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

R J B A ಟ್ರೋಫಿ – 2026 30 ವರ್ಷದೊಳಗಿನ ತಂಡದವರಿಗೆ ಪ್ರಥಮ ಬಹುಮಾನವಾಗಿ 15000 ರೂಪಾಯಿ, ದ್ವಿತೀಯ 10000 ರೂಪಾಯಿ ಮತ್ತು ಶಾಶ್ವತ ಫಲಕ ಹಾಗೆ ತೃತೀಯ ಮತ್ತು ಚತುರ್ಥ ಬಹುಮಾನವಾಗಿ ಆಕರ್ಷಕ ಶಾಶ್ವತ ಫಲಕ ಹಾಗೆ ಇನ್ನಿತರ ವೈಯಕ್ತಿಕ ಬಹುಮಾನಗಳು, 30 ವರ್ಷ ಮೇಲ್ಪಟ್ಟ ತಂಡದವರಿಗೆ ತಂಡದವರಿಗೆ ಪ್ರಥಮ ಬಹುಮಾನವಾಗಿ 15000 ರೂಪಾಯಿ, ದ್ವಿತೀಯ 10000 ರೂಪಾಯಿ ಮತ್ತು ಶಾಶ್ವತ ಫಲಕ ಹಾಗೆ ತೃತೀಯ ಮತ್ತು ಚತುರ್ಥ ಬಹುಮಾನವಾಗಿ ಆಕರ್ಷಕ ಶಾಶ್ವತ ಫಲಕ ಹಾಗೆ ಇನ್ನಿತರ ವೈಯಕ್ತಿಕ ಬಹುಮಾನಗಳು ಇರಲಿವೆ.

ಹೆಚ್ಚಿನ ಮಾಹಿತಿಗಾಗಿ 9449611968, 8970064226, 9916009543 ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

URL has been copied successfully!

Discover more from BYNDOOR XPRESS

Subscribe now to keep reading and get access to the full archive.

Continue reading