ಬೈಂದೂರು ಸೂರ್ಯ-ಚಂದ್ರ ಜೋಡುಕರೆ ಕಂಬಳ ಸಂಪನ್ನ

ಬೈಂದೂರು ತಾಲೂಕಿನ ಕಳವಾಡಿಯಲ್ಲಿ ಪ್ರಥಮ ವರ್ಷದ ಸೂರ್ಯ-ಚಂದ್ರ ಜೋಡುಕರೆ ಕಂಬಳವು ಬುಧವಾರ ಬೈಂದೂರು ತಾಲೂಕು ಸಾಂಪ್ರದಾಯಕ ಮತ್ತು ಜೋಡುಕರೆ ಕಂಬಳ ಸಮಿತಿ (ರಿ) ಬೈಂದೂರು ಇವರ ಆಶ್ರಯದಲ್ಲಿ ನಡೆಯಿತು..
ಸಂಜೆ 5:00ಗೆ ಕರೆ ಉದ್ಘಾಟನಾ ಕಾರ್ಯಕ್ರಮವನ್ನು ನೆರವೇರಿಸಿದ ಕಂಬಳ ಕ್ಷೇತ್ರದ ಹಿರಿಯರಾದ ಮರವಂತೆ ರಿಚರ್ಡ್ ರೆಬೆಲ್ಲೊ ಮಾತನಾಡಿ ಕಂಬಳ ಕ್ಷೇತ್ರಕ್ಕೆ ವಿಶೇಷ ಕೊಡುಗೆ ನೀಡಿದ ದಿ ವೆಂಕಟ ಪೂಜಾರಿಯವರ ಸವಿನೆನಪಿಗಾಗಿ ನಡೆಸುತ್ತಿರುವ ಕಂಬಳ ಬಹಳ ಸಂತಸ ನೀಡಿದೆ. ಉಡುಪಿ ಜಿಲ್ಲೆಯ ಗ್ರಾಮೀಣ ಭಾಗದ ಕಂಬಳ ಗಳಿಗೂ ವಿಶೇಷವಾದ ಪ್ರೋತ್ಸಾಹ ಸರ್ಕಾರದಿಂದ ದೊರಕಬೇಕು ಎಂದರು. ಉದ್ಘಾಟನೆ ಕಾರ್ಯಕ್ರಮದಲ್ಲಿ ಉಡುಪಿ ಚಿಕ್ಕಮಂಗಳೂರು ಸಂಸದರಾದ ಕೋಟ ಶ್ರೀನಿವಾಸ್ ಪೂಜಾರಿ ಬೈಂದೂರು ರೈತ ಸಂಘದ ಅಧ್ಯಕ್ಷರಾದ ದೀಪಕ್ ಶೆಟ್ಟಿ ಇತರರು ಉಪಸ್ಥಿತರಿದ್ದರು
ರಾತ್ರಿ ನಡೆದ ಸಭಾ ಕಾರ್ಯಕ್ರಮದಲ್ಲಿ ಕಂಬಳ ಕ್ಷೇತ್ರದಲ್ಲಿ ಮಾಡಿರುವ ಗಣನೀಯ ಸಾಧನೆಯನ್ನು ಗುರುತಿಸಿ, 2022ನೇ ಸಾಲಿನ ರಾಜ್ಯ ಕ್ರೀಡಾ ಪ್ರಶಸ್ತಿ ಪುರಸ್ಕೃತ ಬೈಂದೂರು ಭಾಸ್ಕರ್ ದೇವಾಡಿಗ ಅವರನ್ನು ಹಾಗೂ ಇತ್ತೀಚಿಗೆ ರಾಜ್ಯ ಕಂಬಳ ಅಸೋಸಿಯೇಷನ್ ಅಧ್ಯಕ್ಷರಾಗಿ ಆಯ್ಕೆಯಾದ ಡಾ.ದೇವಿ ಪ್ರಸಾದ್ ಶೆಟ್ಟಿ ಅವರನ್ನು ಅಭಿನಂದಿಸಲಾಯಿತು.

ಸಭಾ ಕಾರ್ಯಕ್ರಮವನ್ನು ಡಾ.ದೇವಿ ಪ್ರಸಾದ್ ಶೆಟ್ಟಿ ಉದ್ಘಾಟಿಸಿ ಮಾತನಾಡಿ ಬೈಂದೂರು ಹೃದಯ ಭಾಗದಲ್ಲಿ ಪ್ರಪ್ರಥಮ ಬಾರಿಗೆ ಹಲವು ಜೋಡುಕೆರೆ ಕಂಬಳವನ್ನು ಬಹಳ ಚೆನ್ನಾಗಿ ಆಯೋಜಿಸಿದ್ದೀರಿ ಮುಂದಿನ ದಿನಗಳಲ್ಲಿ ರಾಜ್ಯ ಕಂಬಳ ಅಸೋಸಿಯೇಷನ್ ವತಿಯಿಂದ ಸಹಕಾರ ನೀಡುವ ಬಗ್ಗೆ ಭರವಸೆ ನೀಡಿದರು,ಹಲವು ವರ್ಷಗಳ ನಂತರ ಕಂಬಳ ಕ್ರೀಡೆಗೆ ರಾಜ್ಯಮಾನತ್ಯೆ ದೊರೆತಿದೆ ,ಬೈಂದೂರು ಭಾಗದ ಕಂಬಳಗಳಿಗೂ ಕೂಡ ಪ್ರೋತ್ಸಾಹ ಧನವನ್ನು ನೀಡುವ ಬಗ್ಗೆ ಭರವಸೆಯನ್ನ ನೀಡಿದರು,ಕಾರ್ಯಕ್ರಮದಲ್ಲಿ ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ,ಜಿಲ್ಲಾ ಕಂಬಳ ಸಮಿತಿಯ ಗೌರವಾಧ್ಯಕ್ಷರಾದ ಶಾಂತಾರಾಂ ಶೆಟ್ಟಿ ಬಾರ್ಕೂರು,ಉಡುಪಿ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ರಾಜು ಪೂಜಾರಿ, ರಾಜ್ಯ ಕಂಬಳ ಅಸೋಸಿಯೇಷನ್ ಕೋಶಾಧಿಕಾರಿ ಲೋಕೇಶ್ ಶೆಟ್ಟಿ ರಾಜ್ಯ ಕಂಬಳ ಎಸ್ಸೋಸಿಯೇಷನ್ ಕಾರ್ಯದರ್ಶಿ ವಿಜಯಕುಮಾರ್ ಕಂಗಿನಮನೆ, ಸಂದೀಪನ್ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯರಾದ ವಿಶ್ವೇಶ್ವರ ಅಡಿಗ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಸಂಜಯ ನಾಯಕ್ , ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೇಂದ್ರ ಸಮಿತಿ ಅಧ್ಯಕ್ಷ ವಾಸು ಮೇಸ್ತ, ಉಡುಪಿ ಜಿಲ್ಲಾ ಸಾಂಪ್ರದಾಯಿಕ ಕಂಬಳದ ಕಾರ್ಯದರ್ಶಿ ಪ್ರಥ್ವಿರಾಜ್ ಶೆಟ್ಟಿ ಬಿಲ್ಲಾಡಿ, ಭಜನಾ ಪರಿಷತ್ ಅಧ್ಯಕ್ಷರಾದ ರಘುರಾಮ್ ಪೂಜಾರಿ, ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಬ್ಯಾಂಕ್ ನ ಮೇಲ್ವಿಚಾರಕ ಶಿವರಾಂ ಪೂಜಾರಿ, ಗೋಪಾಲ್ ಶೆಟ್ಟಿ ಮೂರೂರು, ರಾಜು ಗಾಣಿಗ ಮುಳುವಾಡಿ, ಸಂತೋಷ್ ಪೂಜಾರಿ ಸ್ವಾಮಿಧಾಮ ಕುಂಭಾಶಿ, ಜಯರಾಮ್ ಶೆಟ್ಟಿ ಮಂಡಾಡಿ, ಬೋಳಂಬಳ್ಳಿ ಪರಮೇಶ್ವರ್ ಭಟ್, ಕಂಬಳ ಸಮಿತಿ ಸದಸ್ಯ ಸುಧೀರ್ ದೇವಾಡಿಗ, ಶೇಖರ್ ಖಾರ್ವಿ, ವಿಜಯ್ ಪೂಜಾರಿ ಕೊಡೆರಿ, ಸಂದೇಶ್ ಭಟ್ , ಶರತ್ ಶೆಟ್ಟಿ ಉಪ್ಪುಂದ, ಮುತ್ತಯ್ಯ ಪೂಜಾರಿ ಸಸಿಹಿತ್ಲು , ರವೀಂದ್ರ ಶೆಟ್ಟಿ ಕಾರಿಕಟ್ಟೆ ಮತ್ತಿತರರು ಉಪಸ್ಥಿತರಿದ್ದರು. ಬೈಂದೂರು ತಾಲೂಕು ಕಂಬಳ ಸಮಿತಿ ಅಧ್ಯಕ್ಷ ಮಂಜು ಪೂಜಾರಿ ಪ್ರಾಸ್ತಾವಿಕ ಭಾಷಣ ಮಾಡಿದರು. ಕಿರಣ್ ಬಿಜೂರು ನಿರೂಪಿಸಿ, ದಿನೇಶ್ ಆಚಾರ್ಯ ಸ್ವಾಗತಿಸಿ ವೆಂಕಟೇಶ್ ಬಡಾಮನೆ ಧನ್ಯವಾದಗೈದರು.

ಸ್ಪರ್ಧೆಯಲ್ಲಿ ಒಟ್ಟು 65 ಜತೆ ಕೋಣಗಳು ಭಾಗವಹಿಸಿದ್ದವು.

ಹಲಗೆ ವಿಭಾಗ
ಪ್ರಥಮ
ಕುಪ್ಪಯ್ಯ ನಾಯ್ಕ ಗೊರಟೆ ಭಟ್ಕಳ
ದ್ವಿತೀಯನೇರಳಕಟ್ಟೆ ಕೊಡ್ಲಾಡಿ ಆದ್ವಿನ್ ರವಿರಾಜ್ ಶೆಟ್ಟ
ತೃತೀಯಸ್ವಾಮಿಧಾಮ ಹೊಳೆಕಟ್ಟು ಕುಂಬಾಶಿ
ಚತುರ್ಥಮೊಳೆಬೈಲು ಗಂಗೆಬೈಲು ದಿ. ಶುಕ್ರ ಪೂಜಾರಿ

ಹಗ್ಗ ಅತೀ ಕಿರಿಯ ವಿಭಾಗ
ಪ್ರಥಮ
ದಿ. ಶೀನ ಪೂಜಾರಿ ವಿ. ಕೆ. ಗ್ರೂಪ್ಸ್ ಕಮ್ಮಟ್ಟು ಹೊಸಮನೆ ಬನ್ನಾಡಿ
ದ್ವಿತೀಯಆಸಿಕಾನ್ ಜೋಗಿನಮನೆ ಭಟ್ಕಳ ಶಂಕರ ನಾಗೂರು
ತೃತೀಯ– –ಸಮೃದ್ಧಿ ಪ್ರಸಿದ್ದಿ ದುರ್ಗಾ ಫ್ರೆಂಡ್ಸ್ ಕಂಚಿಕಾನ್ ಬಿ.
ಚತುರ್ಥವರಶ್ರೀ ವಾದಿರಾಜ ಹಾಲಾಡಿ

ಹಗ್ಗ ಕಿರಿಯ ವಿಭಾಗ
ಪ್ರಥಮ– –ದಿ. ಬಾಬಣ್ಣ ನಾಯ್ಕ ಕೊಕ್ಕರ್ಣೆ ವಡ್ಡಪ್ಪಿ
ದ್ವಿತೀಯಮಂಜು ಪೂಜಾರಿ ಮಯ್ಯಾಡಿ ಪಿಣ್ಕಿಮನೆ
ತೃತೀಯಶ್ರೀ ದುರ್ಗಾ ಕೃಷ್ಣ ಮೇಸ್ತ್ರಿ ಕೂಡ್ಲಿ ಬಾರ್ಕೂರು
ಚತುರ್ಥಸಮೃದ್ಧಿ ಪ್ರಸಿದ್ಧಿ ದುರ್ಗಾ ಫ್ರೆಂಡ್ಸ್ ಕಂಚಿಕಾನು

ಹಗ್ಗ ಹಿರಿಯ ವಿಭಾಗ
ಪ್ರಥಮ
– – ಕೋಟ ಮಣೂರು ಪಡುಕೆರೆ ದಿ. ಸೀನ ಪೂಜಾರಿ
ದ್ವಿತೀಯಬೈಂದೂರು ಸಸಿಹಿತ್ತು ದಿ. ವೆಂಕಟ ಪೂಜಾರಿ
ತೃತೀಯಗಿರಿಜಾ ರೋಡ್‌ಲೈನ್ಸ್ ಕೋಟ ಗಾಡಿ ಕೂಸ ಪೂಜಾರಿ ಎ.
ಚತುರ್ಥಗಿರಿಜಾ ರೋಡ್ಲೈನ್ಸ್ ಕೋಟ ಗಾಡಿ ಕೂಸ ಪೂಜಾರಿ ಬಿ.

URL has been copied successfully!

Discover more from BYNDOOR XPRESS

Subscribe now to keep reading and get access to the full archive.

Continue reading