ಬಿಜೂರು ಮುರ್ಗೋಳಿಹಕ್ಲು ಶ್ರೀ ರಾಮ ನಾಮ ಕೋಟಿ ಜಪ ಯಜ್ಞಕ್ಕೆ ಚಾಲನೆ

ಬಿಜೂರು ಮುರ್ಗೋಳಿಹಕ್ಲು ನಂದಿಕೇಶ್ವರ ದೈವಸ್ಥಾನದ ದೇವರ ಮತ್ತು ಪರಿವಾರ ದೈವಗಳ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಹಾಗೂ ಭಜನಾ ಸುವರ್ಣ ಮಹೋತ್ಸವದ ಪ್ರಯುಕ್ತ ಸಾನಿಧ್ಯದಲ್ಲಿ ದೈವಿಕತೆಯ ಅಭ್ಯುದಯಕ್ಕಾಗಿ ‘ಕೋಟಿ ಶ್ರೀ ರಾಮ ನಾಮ ಜಪ ಯಜ್ಞ’ಭಕ್ತಾದಿಗಳ ಸಮ್ಮುಖದಲ್ಲಿ ತಾರೀಖು 11-01-2026ನೇ ಭಾನುವಾರ ಬೆಳಿಗ್ಗೆ 10-10’ಕ್ಕೆ ಚಾಲನೆ ದೊರಕಿತು.
ದಿನಾಂಕ 11-01-2026 ರಿಂದ 11-04-2026ರ ತನಕ ಪ್ರತಿನಿತ್ಯ ಶ್ರೀ ರಾಮತಾರಕ ಮಂತ್ರ ಜಪವು ಶ್ರೀ ನಂದಿಕೇಶ್ವರ ಸಬಾಭವನದಲ್ಲಿ ನಡೆಯುತ್ತಿರುತ್ತದೆ ಹಾಗೂ 18-04-2026ರಂದು ಶ್ರೀ ರಾಮ ನಾಮ ಕೋಟಿ ಜಪ ಸಮರ್ಪಣೆಯೊಂದಿಗೆ ಸಂಪನ್ನಗೊಳ್ಳಲಿದೆ.

URL has been copied successfully!

Discover more from BYNDOOR XPRESS

Subscribe now to keep reading and get access to the full archive.

Continue reading