ಶ್ರೀ ಈಶ್ವರ ಮಾರಿಕಾಂಬ ದೇವಸ್ಥಾನ ಶ್ರೀ ಕ್ಷೇತ್ರ ಕಳವಾಡಿ 40ನೇ ವರ್ಷದ ನಗರ ಭಜನಾ ಸಮಾರಂಭ ದಿನಾಂಕ ಜನವರಿ 19 ರಿಂದ ಆರಂಭವಾಗಿ ಜನವರಿ 31ರ ತನಕ ನಡೆಯಲಿದೆ. 30 ಜನವರಿ ಶುಕ್ರವಾರದಂದು ದುರ್ಗಾ ಹೋಮ ಹಾಗೆ ಜನವರಿ 31ರಂದು ವಿಶೇಷ ರುದ್ರಾಭಿಷೇಕ, ಮಂಗಳಾಚರಣೆ ಮಹಾಮಂಗಳಾರತಿ ದೀಪ ವಿಸರ್ಜನೆ ಮತ್ತು ಮಹಾ ಅನ್ನಸಂತರ್ಪಣೆ ಕಾರ್ಯಕ್ರಮ ಜರುಗಲಿರುವುದು.
ಕಾರ್ಯಕ್ರಮದ ವಿಶೇಷವಾಗಿ ಕುಣಿತ ಭಜನಾ ಸ್ಪರ್ಧೆಯನ್ನು ಜನವರಿ 30ರಂದು ಹಮ್ಮಿಕೊಂಡಿದ್ದು ಪ್ರಥಮ ಬಹುಮಾನವಾಗಿ 15000 ನಗದು, ದ್ವಿತೀಯ 10,000 ಹಾಗೆ ತೃತೀಯ ಬಹುಮಾನವಾಗಿ 5000 ಹಾಗೆ ಶಾಶ್ವತ ಫಲಕ ಹಾಗೆ ಭಜನೆಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ 40ನೇ ವರ್ಷದ ಭಜನಾ ಸಂಭ್ರಮದಲ್ಲಿ ಆನ್ಲೈನ್ ಭಕ್ತಿ ಗೀತೆ ಸ್ಪರ್ಧೆ ಕೂಡ ಏರ್ಪಡಿಸಿದ್ದಾರೆ, ಸ್ಪರ್ಧಾರ್ಥಿಗಳು ಜನವರಿ 29ರ ಒಳಗಾಗಿ 9900127127 ವಾಟ್ಸಪ್ ನಂಬರಿಗೆ ಹೆಸರು ವಿಳಾಸ ದೊಂದಿಗೆ ರೆಕಾರ್ಡ್ ಮಾಡಿದ ವಿಡಿಯೋ ಕಳುಹಿಸತಕ್ಕದ್ದು ಹಾಗೆ ವಿವಿಧ ವಿಭಾಗಗಳಲ್ಲಿ ಸ್ಪರ್ಧೆ ಏರ್ಪಡಿಸಲಾಗುವುದು ಎಂದು ಶ್ರೀ ಮಾರಿಕಾಂಬ ಭಜನಾ ಮಂಡಳಿಯವರು ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿರಿ 9449611968, 944862525, 9945167168

URL has been copied successfully!