ಉಡುಪಿ: ಉಡುಪಿ ರೋಡ್ ಸೇಫ್ಟಿ ಅಥಾರಿಟಿ ನಿರ್ಧಾರ ಪ್ರಕಾರ ಆರು ಚಕ್ರ ಮತ್ತು ಅದಕ್ಕಿಂತ ಜಾಸ್ತಿ ಇರುವಂತ ಎಂಎಂಆರ್‌ಡಿ ಕಾಯ್ದೆ ಅಡಿಯಲ್ಲಿ ಬರುವ ಕೆಂಪು ಕಲ್ಲು ಹೊಯ್ಗೆ ಎಂ ಸ್ಯಾಂಡ್ ಇತ್ಯಾದಿ ಸಾಗಾಟ ಮಾಡುವಂತಹ ವಾಹನಗಳು ಕಡ್ಡಾಯವಾಗಿ ಸ್ಪೀಡ್ ಗವರ್ನರ್ 60 ಕಿಲೋ ಮೀಟರ್ ಪರ್ ಅವರ್ ಅಳವಡಿಸಬೇಕು ಎಂದು ಆದೇಶ ಹೊರಡಿಸಲಾಗಿದೆ.
ಮುಂದಿನ 10 ದಿನಗಳ ಒಳಗೆ ವಾಹನಗಳಿಗೆ ಸ್ಪೀಡ್ ಗವರ್ನರ್ ಅಳವಡಿಸದಿದ್ದಲ್ಲಿ ಜಿಲ್ಲೆಯಲ್ಲಿ ಸಂಚಾರಕ್ಕೆ ಅವಕಾಶವಿರುವುದಿಲ್ಲ. ನಿಯಮ ಉಲ್ಲಂಘಿಸಿದಲ್ಲಿ ಕಾನೂನು ರೀತಿಯ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್ ಪಿ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

