ಬೈಂದೂರು ಸಿಟಿ JCI ವಾರ್ಷಿಕ ಸಂಭ್ರಮ “ಶಿವಶಕ್ತಿ”

ಬೈಂದೂರು ಸಿಟಿ JCI ವಾರ್ಷಿಕ ಸಂಭ್ರಮ ಶಿವಶಕ್ತಿ ಕಾರ್ಯಕ್ರಮವು ಬೈಂದೂರು ಶಾರದಾ ವೇದಿಕೆಯಲ್ಲಿ ರಾಜು ಮೊಗವೀರ ಇವರ ಅಧ್ಯಕ್ಷತೆಯಲ್ಲಿ ಭಾನುವಾರ ನೆರವೇರಿತು. ಕಾರ್ಯಕ್ರಮದ ಸಭಾ ವೇದಿಕೆಯನ್ನು ಬ್ರಹ್ಮಕುಮಾರಿ ದೀಪಾ ಇವರು ಉದ್ಘಾಟಿಸಿದರು. ಈ ಪ್ರಯುಕ್ತ ಛದ್ಮವೇಷ ಸ್ಪರ್ಧೆ ಮತ್ತು ಆಟೋಟ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ನೀಡಲಾಯಿತು. ಹಾಗೆ ಲಕ್ಕಿ ಕೂಪನ್ ಡ್ರಾ ಎಲ್ಲರ ಸಮ್ಮುಖದಲ್ಲಿ ನಡೆಯಿತು‌. ಸಭೆಯಲ್ಲಿ 2025ರ ಜೆ ಸಿ ಸಾಧನಾಶ್ರೀ ಪ್ರಶಸ್ತಿಯನ್ನು ರಾಮ ಮೊಗವೀರ ಇವರಿಗೆ ನೀಡಲಾಯಿತು.


ಸಭಾ ವೇದಿಕೆಯಲ್ಲಿ ಜೆಸಿ ವಲಯ 2025ರ ನಿಕಟ ಪೂರ್ವ ಅಧ್ಯಕ್ಷರಾದ ಅಭಿಲಾಶ್, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಮದನ್ ಕುಮಾರ್, ಬಿಎಸ್ಎನ್ಎಲ್ ನಿವೃತ್ತ ಅಧಿಕಾರಿ ರಾಮ ಮೊಗವೀರ, ಉದ್ಯಮಿ ಪ್ರಸಾದ್ ಪ್ರಭು, ಉದ್ಯಮಿ ವೀರೇಂದ್ರ ಪೂಜಾರಿ, ಪಟ್ಟಣ ಪಂಚಾಯತ್ ಹೆಲ್ತ್ ಇನ್ಸ್ಪೆಕ್ಟರ್ ಸಂತೋಷ್, ನಿಕಟ ಪೂರ್ವ ಅಧ್ಯಕ್ಷರಾದ ಅನಿತಾ ಆರ್ ಕೆ, ಕಾರ್ಯದರ್ಶಿ ರಾಘವೇಂದ್ರ, ಲೇಡಿ ಜೆ ಸಿ ಸಂಯೋಜಕಿ ಕವಿತಾ ಹಾಗೂ ಇತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಮಣಿಕಂಠ ದೇವಾಡಿಗ ಸಂಸ್ಥೆಯ ಪರಿಚಯಗೈದರು, ಚೈತ್ರ ಕಾರ್ಯಕ್ರಮ ನಿರೂಪಿಸಿ, ಪ್ರಿಯದರ್ಶಿನಿ ಅವರು ಸ್ವಾಗತಿಸಿ, ಕಾರ್ಯದರ್ಶಿ ರಾಘವೇಂದ್ರ ವಂದನೆಗೈದರು.

ನಂತರ ವೇದಿಕೆಯಲ್ಲಿ ಓಂಕಾರ್ ಕಲಾತಂಡ ತೆಕ್ಕಟ್ಟೆ ಇವರಿಂದ ಹಾಸ್ಯಮಯ ನಗೆ ನಾಟಕ ಪ್ರದರ್ಶನಗೊಂಡಿತು.

URL has been copied successfully!

Discover more from BYNDOOR XPRESS

Subscribe now to keep reading and get access to the full archive.

Continue reading