ಇತಿಹಾಸ ಪ್ರಸಿದ್ಧ ಸಾಂಪ್ರದಾಯಕ ನಾವುಂದ ಕಂಬಳ ಮಹೋತ್ಸವವು ದಿನಾಂಕ 3012-2025ರಂದು 38 ವರ್ಷಗಳಿಂದ ಈ ಪರಿಸರದಲ್ಲಿ ಕಂಬಳವನ್ನು ಉಳಿಸಿ ಬೆಳೆಸಿಕೊಂಡು ಬಂದಿರುವ ವೆಂಕಟರಮಣ ಗಾಣಿಗ ನಾವುಂದ ಇವರ ನೇತೃತ್ವದಲ್ಲಿ ಕಂಬಳವು ಸಂಭ್ರಮದಲ್ಲಿ ನಡೆಯಿತು.ಕಂಬಳಕ್ಕೆ ಬಂದ ಕೋಣಗಳ ಮಾಲಿಕರಿಗೆ ವೀಳ್ಯ, ತೆಂಗಿನಕಾಯಿ ನೀಡಿ ಬರಮಾಡಿಕೊಳ್ಳಲಾಯಿತು. ಹಗ್ಗದ ಅತಿಕಿರಿಯ ವಿಭಾಗ ,ಹಗ್ಗದ ಕಿರಿಯ ವಿಭಾಗ, ಹಗ್ಗ ಹಿರಿಯ ವಿಭಾಗ, ಹಲಗೆ ಓಟ ಒಟ್ಟು 4 ವಿಭಾಗದಲ್ಲಿ ಸ್ಪರ್ಧೆ ನಡೆಯಿತು.


ವಿಜೇತರಾದ ಕೋಣಗಳ ಮಾಲೀಕರಿಗೆ ಮತ್ತು ಕ್ರೀಡಾಳುಗಳಿಗೆ ನಗದು ಮತ್ತು ಶಾಶ್ವತ ಫಲಕದೊಂದಿಗೆ ಪುರಸ್ಕರಿಸಲಾಯಿತು ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಅವಿನಿರತದ ಕಂಬಳ ಕ್ಷೇತ್ರದ ಸೇವೆಗಾಗಿ ಬೈಂದೂರು ತಾಲೂಕು ಕಂಬಳ ಸಮಿತಿ ವತಿಯಿಂದ ನಾವುಂದ ವೆಂಕಟರಮಣ ಗಾಣಿಗ ಇವರನ್ನು ಅಭಿನಂದಿಸಲಾಯಿತು ಹಾಗೂ ಇತ್ತೀಚೆಗೆ ಮಂಗಳೂರು ಕಂಬಳದಲ್ಲಿ ಅತಿ ಕಡಿಮೆ ಸಮಯದಲ್ಲಿ ಕೋಣವನ್ನು ಓಡಿಸಿ ದಾಖಲೆ ಸೃಷ್ಟಿಸಿದ ಸ್ವರೂಪ್ ಕುಮಾರ್ ಕುಂದಬಾರಂದಡಿ ಸನ್ಮಾನಿಸಲಾಯಿತು.


ಸಭಾ ಕಾರ್ಯಕ್ರಮದಲ್ಲಿ ಬೈಂದೂರು ತಾಲೂಕು ಕಂಬಳ ಸಮಿತಿ ಅಧ್ಯಕ್ಷ ಮಂಜು ಪೂಜಾರಿ, ಕಾರ್ಯದರ್ಶಿ ಸುಧೀರ್ ದೇವಾಡಿಗ,ರಾಜ್ಯ ಕಂಬಳಸೋಸಿಯೇಷನ್ ಪ್ರತಿನಿಧಿ ವಿಕ್ರಂ ವೆಂಕಟ ಪೂಜಾರಿ, ಬೋಳಂಬಳ್ಳಿ ಪರಮೇಶ್ವರ್ ಭಟ್, ನಾವುಂದ ಗ್ರಾಮ ಪಂಚಾಯತ್ ಸದಸ್ಯ ರಾಜೇಶ್ ಪೂಜಾರಿ, ವಿಶ್ವನಾಥ ಪೂಜಾರಿ, ನಾಗರಾಜ ಗಾಣಿಗ ಹಾಗೂ ನಾವುಂದ ಕಂಬಳ ಸಮಿತಿಯ ಸರ್ವ ಸದಸ್ಯರು ಊರ ಗ್ರಾಮಸ್ಥರು ಕಂಬಳ ಅಭಿಮಾನಿಗಳು ಉಪಸ್ಥಿತರಿದ್ದರು.
ಮಂಜುನಾಥ ಗಾಣಿಗ ಸ್ವಾಗತಿಸಿದರು, ರಾಜೇಶ್ ವಂದಿಸಿದರು, ಕಿಶೋರ್ ಸಸಿಹಿತ್ಲು ಕಾರ್ಯಕ್ರಮ ನಿರೂಪಿಸಿದರು

URL has been copied successfully!

Discover more from BYNDOOR XPRESS

Subscribe now to keep reading and get access to the full archive.

Continue reading