ಕಂಬಳದಲ್ಲಿ ಅತಿ ವೇಗದ ಓಟದ ದಾಖಲೆ ಸೃಷ್ಟಿಸಿದ ಸ್ವರೂಪ್ ಕುಮಾರ್ ಮಾಸ್ತಿಕಟ್ಟೆ

ಕಂಬಳದ ಅತಿ ವೇಗದ ಓಟದ ದಾಖಲೆಯನ್ನು ಮಂಗಳೂರು ರಾಮ ಲಕ್ಷ್ಮಣ ಜೋಡುಕೆರೆ ಕಂಬಳದ ನೇಗಿಲು ಹಿರಿಯ ವಿಭಾಗದ ಫೈನಲ್ ಸ್ಪರ್ಧೆಯಲ್ಲಿ 80 ಬಡಗಬೆಟ್ಟು ಕಲ್ಲಪಾಪು ಶ್ರೀಕಾ ಸಂದೀಪ್ ಶೆಟ್ಟಿ ಅವರ ಕೋಣಗಳನ್ನು ಓಡಿಸಿದ
ಕುಂದ ಬಾರಂದಡಿ ಮಾಸ್ತಿಕಟ್ಟೆ ಸ್ವರೂಪ್ ಕುಮಾರ್ ಅತಿ ವೇಗದ ಓಟಗಾರನಾಗಿ ಮೂಡಿಬಂದಿದ್ದಾರೆ. 125 ಮೀಟರ್ ಉದ್ದವನ್ನು 10.87 ಸೆಕೆಂಡ್ ಗಳಲ್ಲಿ ಕ್ರಮಿಸಿ ಅವು 100 ಮೀಟರ್ ದೂರವನ್ನು 8.69 ಸೆಕೆಂಡ್ ಗಳಲ್ಲಿ ಕ್ರಮಿಸಿದಂತಾಗಿದೆ.

ಕಂಬಳದ ಅತಿ ವೇಗದ ಓಟದ ದಾಖಲೆ ಈ ಹಿಂದೆ ಮಿಜಾರು ಅಶ್ವತ್ಥಪುರದ ಶ್ರೀನಿವಾಸ ಗೌಡ ಹೆಸರಿನಲ್ಲಿತ್ತು. ಆ ಕೋಣಗಳು 125 ಮೀಟರ್ ಅನ್ನು 10.95 ಸೆಕೆಂಡುಗಳಲ್ಲಿ ಕ್ರಮಿಸಿ, ಅವು 100 ಮೀಟರ್ ದೂರವನ್ನು 8.76 ಸೆಕೆಂಡ್ ಗಳಲ್ಲಿ ಕ್ರಮಿಸಿದವು. ಸ್ವರೂಪ್ ಕುಮಾರ್ ಇವರ ದಾಖಲೆಯ ಓಟವನ್ನು ಕಂಬಳಾಭಿಮಾನಿಗಳು ಶ್ಲಾಘಿಸಿದ್ದಾರೆ.

URL has been copied successfully!

Discover more from BYNDOOR XPRESS

Subscribe now to keep reading and get access to the full archive.

Continue reading