ಪ್ರವಾಸೋದ್ಯಮದ ಮೂಲಕ ಆರ್ಥಿಕ ಪ್ರಗತಿ ನಮ್ಮೆಲ್ಲರ ಸಂಕಲ್ಪ ವಾಗಬೇಕು: ಸಂಸದ ಬಿ ವೈ ರಾಘವೇಂದ್ರ

ಬೈಂದೂರು ಉತ್ಸವ 2026 ಅಂಗವಾಗಿ ಗ್ರಾಮ ಪಂಚಾಯತ್ ತ್ರಾಸಿ ನೇತೃತ್ವದಲ್ಲಿ ಟೀಮ್ ತ್ರಾಸಿ ಇವರ ಸಹಯೋಗದೊಂದಿಗೆ ತ್ರಾಸಿ ಗ್ರಾಮೋತ್ಸವ ಡಿಸೆಂಬರ್ 28 ರಂದು ಸಂಸದ ಬಿ ವೈ ರಾಘವೇಂದ್ರ ಉದ್ಘಾಟಿಸಿ ಮಾತನಾಡಿ ಕರಾವಳಿ ಪ್ರದೇಶಗಳ ಸಮಗ್ರ ಅಭಿವೃದ್ಧಿ ಸ್ಥಳೀಯ ಯುವ ಜನತೆಗೆ ಅವಕಾಶಗಳು ಹಾಗೂ ಪ್ರವಾಸೋದ್ಯಮದ ಮೂಲಕ ಆರ್ಥಿಕ ಪ್ರಗತಿ ನಮ್ಮೆಲ್ಲರ ಸಂಕಲ್ಪ ವಾಗಬೇಕು. ಈ ದಿಕ್ಕಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಹಕಾರದೊಂದಿಗೆ ನಿರಂತರ ಪ್ರಯತ್ನ ಮುಂದುವರಿಯಲಿದೆ ಎಂದರು.


ಈ ಸಂದರ್ಭದಲ್ಲಿ ಬೈಂದೂರು ಕ್ಷೇತ್ರದ ಶಾಸಕರಾದ ಶ್ರೀ ಗುರುರಾಜ್ ಗಂಟಿಹೊಳೆ, ಮಂಡಲ ಅಧ್ಯಕ್ಷರಾದ ಶ್ರೀಮತಿ ಅನಿತಾ, ತ್ರಾಸಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ಮಿಥುನ್ ದೇವಾಡಿಗ, ಮಹಾಶಕ್ತಿ ಕೇಂದ್ರ ಅಧ್ಯಕ್ಷರಾದ ಶ್ರೀ ರವಿ ಖಾರ್ವಿ ಹಾಗೂ ಟೀಮ್ ತ್ರಾಸಿ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.

URL has been copied successfully!

Discover more from BYNDOOR XPRESS

Subscribe now to keep reading and get access to the full archive.

Continue reading