ಬೈಂದೂರು : ಜನತಾ ನ್ಯೂ ಇಂಗ್ಲಿಷ್ ಮೀಡಿಯಂ ಶಾಲೆ ಕಿರಿಮಂಜೇಶ್ವರ ನೂತನ ಕೊಠಡಿ ಹಾಗೂ ಆಡಳಿತ ಮಂಡಳಿ ಕಛೇರಿ ಉದ್ಘಾಟನಾ ಸಮಾರಂಭ ಗುರುವಾರ ಶಾಲೆಯ ಆವರಣದಲ್ಲಿ ನಡೆಯಿತು.
ಶೃಂಗೇರಿ ಶಾರದಾ ಪೀಠದ ಶ್ರೀಮಜ್ಜಗದುರು ಶ್ರೀ ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳವರ ಅಮೃತ ಹಸ್ತದಿಂದ ಜನತಾ ನ್ಯೂ ಇಂಗ್ಲಿಷ್ ಮೀಡಿಯಂ ಶಾಲೆಯ ನೂತನ ಕೊಠಡಿ ಹಾಗೂ ಆಡಳಿತ ಮಂಡಳಿ ಕಛೇರಿ ಉದ್ಘಾಟಿಸಿ, ಆರ್ಶೀವಚನ ನೀಡಿದರು.

ಹೆಮ್ಮಾಡಿ ಜನತಾ ಸಮೂಹ ಸಂಸ್ಥೆಗಳ ಅಧ್ಯಕ್ಷ ಗಣೇಶ್ ಮೊಗವೀರ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಶ್ರೀಗಳಿಗೆ ಪಾದಪೂಜೆ ನೆರವೇರಿಸಿದ್ದರು.

ಶೃಂಗೇರಿ ಶಾರದಾ ಪೀಠದ ಪ್ರಾಂತೀಯ ಧರ್ಮಾಧಿಕಾರಿ ವೇ.ಮೂ. ಲೋಕೇಶ್ ಅಡಿಗ ಬಡಾಕೆರೆ, ತಾ.ಪಂ. ಮಾಜಿ ಉಪಾಧ್ಯಕ್ಷೆ ಶ್ಯಾಮಲ ಕುಂದರ್, ಜನತಾ ಸಮೂಹ ಸಂಸ್ಥೆಗಳ ಪ್ರಧಾನ ಕಾರ್ಯದರ್ಶಿ ಶ್ಯಾಮಲ ಗಣೇಶ್ ಮೊಗವೀರ, ಕಿರಿಮಂಜೇಶ್ವರ ಗ್ರಾ.ಪಂ ಅಧ್ಯಕ್ಷ ಶೇಖರ್ ಖಾರ್ವಿ, ನಾವುಂದ ಗ್ರಾ.ಪಂ ಅಧ್ಯಕ್ಷ ನರಸಿಂಹ ದೇವಾಡಿಗ, ಹೆಮ್ಮಾಡಿ ಜನತಾ ಪಿ.ಯು. ಕಾಲೇಜಿನ ಉಪ ಪ್ರಾಂಶುಪಾಲ ರಮೇಶ್ ಪೂಜಾರಿ, ಜನತಾ ನ್ಯೂ ಇಂಗ್ಲಿಷ್ ಮೀಡಿಯಂ ಶಾಲೆ ಕಿರಿಮಂಜೇಶ್ವರ ಮುಖ್ಯೋಪಾಧ್ಯಾಯನಿ ದೀಪಿಕಾ ಆಚಾರ್ಯ, ಪುರೋಹಿತ್ ಲಕ್ಷ್ಮೀಶ್ ಅಡಿಗ ಬಡಾಕೆರೆ, ಗಜೇಂದ್ರ ಹೊಳ್ಳ ಹೆಮ್ಮಾಡಿ, ಹಾಗೂ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು, ಪೋಷಕರು, ಉಪನ್ಯಾಸಕರು ಇದ್ದರು.
ಜನತಾ ಸಮೂಹ ಸಂಸ್ಥೆಯ ಕನ್ನಡ ಉಪನ್ಯಾಸಕ ಉದಯ್ ನಾಯ್ಕ್ ಸ್ವಾಗತಿಸಿದರು. ಪುರೋಹಿತ್ ದಾಮೋದರ್ ಶರ್ಮಾ ಬಾರ್ಕೂರು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.


