ರಾಹುತನಕಟ್ಟೆಯಲ್ಲಿ ವೆಂಕಟ ಪೂಜಾರಿ ಸವಿನೆನಪಿಗಾಗಿ ರಾಜ್ಯಮಟ್ಟದ ಹಗ್ಗಜಗ್ಗಾಟ ಪಂದ್ಯಾವಳಿ

ಬೈಂದೂರಿನ ಯಡ್ತರೆಯಲ್ಲಿ ರಾಹುತೇಶ್ವರ ಫ್ರೆಂಡ್ಸ್ ರಾಹುತನಕಟ್ಟೆ ಇವರ ಆಶ್ರಯದಲ್ಲಿ ದಿ /ವೆಂಕಟ ಪೂಜಾರಿಯವರ ಸವಿನೆನಪಿಗಾಗಿ ಪುರುಷ ಮತ್ತು ಮಹಿಳೆಯರ ರಾಜ್ಯಮಟ್ಟದ ಆಯ್ದ ತಂಡಗಳ ಹಗ್ಗಜಗ್ಗಾಟ ಪಂದ್ಯಾವಳಿಯು ಸಂಭ್ರಮ ಸಡಗರದಿಂದ ಸಂಪನ್ನಗೊಂಡಿತು.
ಮಹಿಳಾ ವಿಭಾಗದಲ್ಲಿ 8 ತಂಡಗಳು ಭಾಗವಹಿಸಿದವು ನಾಕ್ ಔಟ್ ಮಾದರಿಯ ಪಂದ್ಯಾಟಗಳನ್ನು ನಡೆಸಲಾಯಿತು ಪುರುಷರ ವಿಭಾಗದಲ್ಲಿ ಲೀಗ್ ಮಾದರಿಯ ಪಂದ್ಯಾಟಗಳನ್ನು ಆಯೋಜಿಸಲಾಯಿತು.


ಕಾರ್ಯಕ್ರಮದ ಸಭಾ ವೇದಿಕೆಯಲ್ಲಿ ಗೌರವಾನ್ವಿತ ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ ವೆಂಕಟ ಪೂಜಾರಿಯವರ ಬದುಕಿನ ರೀತಿ ಯುವಕರಿಗೆ ಮಾರ್ಗದರ್ಶನೀಯ,ಅವರ ಸಂಪ್ರದಾಯ, ಆಚರಣೆಗಳನ್ನು ಗೌರವಿಸುವ ರೀತಿ ಅನುಕರಣೆಯ ಎಂದರು, ಕೊಲ್ಲೂರು ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಬಾಬು ಹೆಗಡೆ ಮಾತನಾಡಿ ಸ್ನೇಹಜೀವಿಯಾಗಿದ್ದ ವೆಂಕಟ ಪೂಜಾರಿಯವರು ವಯಸ್ಸಿನಲ್ಲಿ ನನಗಿಂತ ಚಿಕ್ಕವರಾದರೂ ಕೂಡ ಅವರ ದುಃಖದ ಸ್ಥಿತಿಗಳನ್ನು ನೋಡುವಂತದ್ದು ನಮ್ಮ ದೌರ್ಭಾಗ್ಯ ಎಂದು ಬೇಸರಪಟ್ಟರು. ಸಭಾ ಕಾರ್ಯಕ್ರಮದ ವೇದಿಕೆಯಲ್ಲಿ ಬೈಂದೂರು ಕ್ಷೇತ್ರದ ಶಾಸಕರಾದ ಗುರುರಾಜ್ ಶೆಟ್ಟಿ ಗಂಟಿಹೊಳೆ, ಸುರೇಶ್ ಬಟವಾಡಿ, ಸದಾಶಿವ ಡಿ, ಮಹೇಂದ್ರ ಪೂಜಾರಿ, ಶಿವರಾಮ್ ಪೂಜಾರಿ,ರಾಜು ಮೊಗವೀರ, ಸುರೇಶ್ ಶೆಟ್ಟಿ, ಶ್ರೀ ರಾಹುತೇಶ್ವರ ಫ್ರೆಂಡ್ಸ್ ಇದರ ಅಧ್ಯಕ್ಷರಾದ ವೀರೇಂದ್ರ ಪೂಜಾರಿ ಮತ್ತು ಇತರರು ಉಪಸ್ಥಿತರಿದ್ದರು

ಪಂದ್ಯಾವಳಿಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ವಿಶೇಷ ಸೇವೆ ಸಲ್ಲಿಸಿ ಜನಮಾನಸ ಸೇರಿದ ದಿ ವೆಂಕಟ ಪೂಜಾರಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಲಾಯಿತು


ಶ್ರೀ ಮಾರಿಕಾಂಬಾ ಸಿಂಗಾರಿ ಮೇಳದವರಿಂದ ಅದ್ದೂರಿ ಚಂಡೆ ಹಾಗೂ ವಯಲಿನ್ ಸಮ್ಮಿಲನ ಕಾರ್ಯಕ್ರಮ ನಡೆಯಿತು, ಸ್ಥಳೀಯ ವಿದ್ಯಾರ್ಥಿಗಳಿಗೆ ನೃತ್ಯ ವೈಭವ ನೆರವೇರಿತು, ಸಾಧನೆಗೈದ ಸಾಧಕರಿಗೆ ಅಭಿನಂದಿಸಲಾಯಿತು, ಕೆ ಸಿ ರಾಜೇಶ್ ಪ್ರಾಸ್ತಾವಿಕ ನುಡಿಗೈದರು, ರಾಮ ಮೊಗವೀರ ಸ್ವಾಗತಿಸಿದರು, ಪ್ರಸನ್ನ ಧನ್ಯವಾದಗೈದರು ,ಕಿರಣ್ ಬಿಜೂರು ಕಾರ್ಯಕ್ರಮ ನಿರೂಪಿಸಿದರು

ಹಗ್ಗ ಜಗ್ಗಾಟ ಫಲಿತಾಂಶ
ಮಹಿಳಾ ವಿಭಾಗ
ಪ್ರಥಮ: ಪರಶುರಾಮ ಫ್ರೆಂಡ್ಸ್ ಉದನೆ
ದ್ವಿತೀಯ: ಉಡುಪಿ ಉಡುಪಿ
ತೃತೀಯ: ಸ್ವಾಮಿ ಫ್ರೆಂಡ್ಸ್ ಮರವಂತೆ
ಚತುರ್ಥ: ಶ್ರೀ ಯಕ್ಷೇಶ್ವರಿ ಉಪ್ಪಿನಕುದ್ರು

ಪುರುಷರ ವಿಭಾಗ
ಪ್ರಥಮ: ಸೌಮ್ಯಾ ಟ್ರಾವೆಲ್ಸ್
ದ್ವಿತೀಯ: ಆಪತ್ಭಾಂದವ ಗೆಳೆಯರ ಬಳಗ
ತೃತೀಯ: ಎಚ್.ಸಿ.ಸಿ ಆರ್ಯ
ಚತುರ್ಥ: ಆಸರೆ ಫ್ರೆಂಡ್ಸ್ ಉಪ್ಪುಂದ

URL has been copied successfully!

Discover more from BYNDOOR XPRESS

Subscribe now to keep reading and get access to the full archive.

Continue reading