ಕೊಡೇರಿ ಹಕ್ರೆಮಠ ಜೈನಜಟ್ಟಿಗ ದೇವರ ಸಾಂಪ್ರದಾಯಕ ಕಂಬಳ ಸಂಪನ್ನ

ಬಿಲ್ಲವ ಸಮಾಜ ಸೇವಾ ಸಂಘ (ರಿ) ಹಕ್ರೆಮಠ ಕೊಡೇರಿ ಇವರ ಆಶ್ರಯದಲ್ಲಿ ನಡೆದ ಕೊಡೇರಿ ಹಕ್ರೆಮಠ ಶ್ರೀ ಜೈನ ಜಟ್ಟಿಗ ದೇವರ ಸಾಂಪ್ರದಾಯಕ ಕಂಬಳ ಸಂಭ್ರಮದಿಂದ ಸಂಪನ್ನಗೊಂಡಿತು.ಕಂಬಳದಲ್ಲಿ 67ಜತೆ ಕೋಣಗಳು ಭಾಗವಹಿಸಿದವು.
ಕಂಬಳದಲ್ಲಿ ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ,ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ, ಶ್ರೀ ಕ್ಷೇತ್ರ ಕೊಲ್ಲೂರು ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಬಾಬು ಹೆಗ್ಡೆ,ಕಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಪ್ರಕಾಶ್ಚಂದ್ರ ಶೆಟ್ಟಿ, ಕುಂದಾಪುರ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷರಾದ ಅಶೋಕ್ ಪೂಜಾರಿ, ಸಿ ಎಸ್ ಖಾರ್ವಿ, ಬೈಂದೂರು ತಾಲೂಕು ಕಂಬಳ ಸಮಿತಿ ಅಧ್ಯಕ್ಷರಾದ ಮಂಜು ಪೂಜಾರಿ, ರಾಜ್ಯ ಕಂಬಳ ಅಸೋಸಿಯೇಷನ್ ಸದಸ್ಯರಾದ ವಿಕ್ರಂ ಪೂಜಾರಿ, ಬಿಲ್ಲವ ಸಮಾಜ ಸೇವಾ ಸಂಘ (ರಿ)ಕೊಡೇರಿ ಇದರ ಗೌರವಾಧ್ಯಕ್ಷರಾದ ಮಹಾದೇವ ಪೂಜಾರಿ ಹಾಗೂ ಇತರರು ಭಾಗವಹಿಸಿದರು. ಆನಂದ ಪೂಜಾರಿ ಕೋಡೇರಿ ಕಾರ್ಯಕ್ರಮ ನಿರೂಪಿಸಿದರು,ಕಿಶೋರ್ ಸಸಿಹಿತ್ಲು ಮತ್ತು ಗಣೇಶ್ ಕೊಠಾರಿ ಕಂಬಳ ವೀಕ್ಷಕ ವಿವರಣೆಯಲ್ಲಿ ಸಹಕರಿಸಿದರು

ಫಲಿತಾಂಶ
ಸಬ್ ಜೂನಿಯರ್ ವಿಭಾಗ
ಪ್ರಥಮ- ಶ್ರೀ ಸ್ಕಂದ ಆರ್ವಿನ್ ಪ್ರದೀಪ್ ಉಳ್ಳೂರು ಕಂದಾವರ (10.13)
ದ್ವಿತೀಯ -ಸಮೃದ್ಧಿ, ಪ್ರಸಿದ್ಧಿ ದೇವಾಡಿಗ ದುರ್ಗಾ ಫ್ರೆಂಡ್ಸ್ ಕಂಚಿಕಾನ್ (10.24)
ತೃತೀಯ -ಸಂಜೀವ ಪೂಜಾರಿ ಕಳಿಹಿತ್ಲು ಕೆರ್ಗಾಲ್ (10.26)

ಹಗ್ಗ ಕಿರಿಯ ವಿಭಾಗ
ಪ್ರಥಮ -ವಿಶ್ವನಾಥ ದೇವಾಡಿಗ ನರಿಗುಡಿ ನಾಯ್ಕನಕಟ್ಟೆ (9.50).
ದ್ವಿತೀಯ -ಶ್ರೀ ಮಾಸ್ತಿಯಮ್ಮ ಮಾಸ್ತಿಕಟ್ಟೆ (10.16)
ತೃತೀಯ -ಶ್ರೀ ಮಹಾದೇವ್ ಪೂಜಾರಿ, ಕೆಳಾಮೊಳೆಬೈಲು ಕೊಡೇರಿ. (10.23)

ಹಗ್ಗ ಹಿರಿಯ ವಿಭಾಗ
ಪ್ರಥಮ -ವೆಂಕಟ ಪೂಜಾರಿ ಸಸಿಹಿತ್ಲು ಬೈಂದೂರು (9.63)
ದ್ವಿತೀಯ -ಶ್ರೀ ಪನ್ನಗ ಹೆಬ್ಬಾರ್ ಭಟ್ಕಳ (10.01)
ತೃತೀಯ -ದಿಶಾ ಶ್ರೇಯಸ್, ನಾರಾಯಣ ದೇವಾಡಿಗ ಮಿಯ್ಯಣಿ (10.17)

ಹಲಗೆ ವಿಭಾಗ
ಪ್ರಥಮ -ಅಧ್ವಿನ್ ರವಿರಾಜ್ ಶೆಟ್ಟಿ ನೆರಳಕಟ್ಟೆ ಕೊಡ್ಲಾಡಿ (10.18)
ದ್ವಿತೀಯ -ಆನಂದ ದೇವಾಡಿಗ ತೆಕ್ಕಟ್ಟೆ ಮೆಲ್ ಗುಡ್ಡೆ ಮನೆ (10.53)
ತೃತೀಯ -ಮೊಳೆಬೈಲು ಶುಕ್ರ ಪೂಜಾರಿ ಕೊಡೇರಿ ಕಿರೀಮಂಜೇಶ್ವರ (10.65)
ಅದೃಷ್ಟ ಕೋಣಗಳ ಬಹುಮಾನ
ಕೋಟಿ ಚನ್ನಯ್ಯ ಯಶ್ವಿನ್ ಮಂಜುನಾಥ್ ಪೂಜಾರಿ ಕಾಮನಮನೆ.

URL has been copied successfully!

Discover more from BYNDOOR XPRESS

Subscribe now to keep reading and get access to the full archive.

Continue reading