ಬೈಂದೂರು ರೈತ ಸಂಘ ಹಾಗೂ ಹಲವು ಸಂಘಟನೆಗಳ ರೈತರ ಒಗ್ಗೂಡಿವಿಕೆಯಲ್ಲಿ ಬೈಂದೂರ್ ಪಟ್ಟಣ ಪಂಚಾಯತಿಗೆ ಗ್ರಾಮೀಣ ಪ್ರದೇಶಗಳನ್ನು ಬೇರ್ಪಡಿಸಬೇಕು ಎನ್ನುವ ಹಲವು ದಿನಗಳ ಅನಿರ್ದಿಷ್ಟಾವಧಿ ಕೂಗು ಮತ್ತಷ್ಟು ತೀವ್ರತೆಯನ್ನು ಪಡೆದುಕೊಂಡು ರೈತರ ಆಕ್ರೋಶ ಭುಗಿಲೆದ್ದಿದೆ.


ಉಡುಪಿ ಜಿಲ್ಲೆಯ ಬೈಂದೂರು ಪಟ್ಟಣ ಪಂಚಾಯತಿ ವ್ಯಾಪ್ತಿಯನ್ನ ಸುಮಾರು 23 ಕಿ.ಮೀ ದೂರದ ಗ್ರಾಮೀಣ ಪ್ರದೇಶಗಳವರೆಗೂ ವಿಸ್ತರಿಸಿರುವುದು ಈ ವಿವಾದಕ್ಕೆ ಕಾರಣವಾಗಿದ್ದು ಸರ್ಕಾರದ ಕ್ರಮಕ್ಕೆ ಅನ್ನದಾತರು ಕೆಂಡವಾಗಿದ್ದಾರೆ
ಹಲವಾರು ದಿನಗಳಿಂದ ಹೋರಾಟದಲ್ಲಿದ್ದ ಗ್ರಾಮೀಣ ಪ್ರದೇಶದ ರೈತರು ಇಂದು ಸಿಡಿದೆದ್ದು ಕೋಣಗಳನ್ನು ಕಟ್ಟಿ ಬೈಂದೂರು ಪಟ್ಟಣದ ಹೃದಯ ಭಾಗದಲ್ಲಿ ಮೆರವಣಿಗೆಯೊಂದಿಗೆ ಆಕ್ರೋಶ ಹೊರ ಹಾಕಿದರು.
ಧರಣಿಯಲ್ಲಿ ರೈತರ ಹೋರಾಟ ದಿನದಿಂದ ದಿನಕ್ಕೆ ಕಾವೇರುತ್ತಿದ್ದು, ಗ್ರಾಮೀಣ ಪ್ರದೇಶ ಸೇರಿಸಿರುವ ಸರ್ಕಾರದ ಈ ಕ್ರಮಕ್ಕೆ ಭಾರಿ ವಿರೋಧ ವ್ಯಕ್ತವಾಗಿದೆ.


