ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ರಾಜ್ಯದ ಕುಟುಂಬಗಳ ಹಾಗೂ ಜನರ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ದಿನಾಂಕ 22 ಸೆಪ್ಟೆಂಬರ್ 2025 ರಂದು ಪ್ರಾರಂಭಿಸಿರುತ್ತದೆ. ಈ ಪೈಕಿ ಸುಮಾರು ತಾಲೂಕಿನಲ್ಲಿ ಸಮೀಕ್ಷೆ ಪೂರ್ಣಗೊಂಡಿರುತ್ತದೆ ಅದಾಗಿಯೂ ಸಮೀಕ್ಷೆ ಬಾಕಿ ಇರುವ ಸಾರ್ವಜನಿಕರು ರಾಜ್ಯ ಮಟ್ಟದ ಸಹಾಯವಾಣಿ ಸಂಖ್ಯೆ: 8050770004, ಜಿಲ್ಲಾ ಮಟ್ಟದ ಸಹಾಯವಾಣಿ 0820-2574881, ಉಡುಪಿ/ಬ್ರಹ್ಮಾವರ/ ಕಾಪು ತಾಲೂಕು ಮಟ್ಟದ ಸಹಾಯವಾಣಿ ಸಂಖ್ಯೆ: 0820-2520739, ಬೈಂದೂರು/ಕುಂದಾಪುರ ತಾಲೂಕು ಮೊ.ನಂ: 9972294198 ಮತ್ತು ಕಾರ್ಕಳ-ಹೆಬ್ರಿ ತಾಲೂಕು ಸಹಾಯವಾಣಿ ಸಂಖ್ಯೆ: 08258-298610 ಗೆ ಕರೆಮಾಡುವ ಮೂಲಕ ತಮ್ಮ ಸ್ಥಳೀಯ ಪಂಚಾಯತ್/ ಪುರಸಭೆ/ ನಗರಸಭೆ ಅಥವಾ ಪಟ್ಟಣ ಪಂಚಾಯತಿಗೆ ತೆರಳಿ ಅಥವಾ ತಮ್ಮ ಮೊಬೈಲ್ ಅಥವಾ ಲ್ಯಾಪ್ಟಾಪ್ ನಲ್ಲಿ https://kscbcselfdeclaration.karnataka.gov.in ಲಿಂಕ್ ಬಳಸಿ ದಿನಾಂಕ 31.10.2025 ರ ಒಳಗಾಗಿ ಸಮೀಕ್ಷೆಯನ್ನು ಪೂರ್ಣಗೊಳಿಸಿ ಉಡುಪಿ ಜಿಲ್ಲೆಯಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಸಂಪೂರ್ಣಗೊಳಿಸಲು ಸಹಕರಿಸುವಂತೆ ಜಿಲ್ಲಾಧಿಕಾರಿ ಇವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

