ಬೈಂದೂರು ಪಟ್ಟಣ ಪಂಚಾಯತಿಗೆ ಸೇರಿರುವ ಗ್ರಾಮೀಣ ಪ್ರದೇಶಗಳನ್ನು ಕೈಬಿಡುವಂತೆ ಬೈಂದೂರು ತಾಲೂಕು ಕಛೇರಿ ಎದುರು ರೈತರ ಅನಿರ್ದಿಷ್ಟಾವಧಿ ಧರಣಿ ನಡೆಯುತ್ತಿದೆ
ಬೈಂದೂರು ಪಟ್ಟಣ ಪಂಚಾಯತ್ ವ್ಯಾಪ್ತಿಗೆ ಗ್ರಾಮೀಣ ಪ್ರದೇಶಗಳನ್ನು ಸೇರಿಸಿದ್ದು ಇದರಿಂದ ಗ್ರಾಮೀಣ ಪ್ರದೇಶದ ಜನ ಜೀವನ ಬಹಳಷ್ಟು ದುಸ್ತರಗೊಂಡಿದೆ ಹಾಗಾಗಿ ಅಲ್ಲಿಯ ಜನರು ನೋವಿನ ದಿನಗಳನ್ನು ಎದುರು ಕಾಣುತ್ತಿದ್ದಾರೆ. ಪ್ರತಿಭಟನಾ ನಿರತರಾದ ರೈತರು ಹಲವು ದಿನಗಳಿಂದ ಹೌದರಾಯನ ವಾಲ್ಗ, ಭಜನಾ ಕುಣಿತ , ಪಂಜಿನ ಮೆರವಣಿಗೆ, ಬುಟ್ಟಿ ನೇಯುವಿಕೆ,ಕೋಣಗಳ ಪ್ರದರ್ಶನ ಹೀಗೆ ಹಲವಾರು ಕಾರ್ಯಕ್ರಮಗಳನ್ನ ಪ್ರತಿಭಟನಾ ಸಭೆಯ ಸ್ಥಳದಲ್ಲಿ ಆಯೋಜಿಸಿ ಆಕ್ರೋಶ ವ್ಯಕ್ತಪಡಿಸಿದರು.
ಬೈಂದೂರು ಭಾಗದ ಹಲವಾರು ನಾಯಕರು, ಜಿಲ್ಲಾ ಎಸ್ ಪಿ, ಇತರ ಅಧಿಕಾರಿಗಳು, ಇತರರು ಭಾಗವಹಿಸಿ ರೈತರಿಗೆ ಭರವಸೆ ಸೂಚಿಸಿದರು.ಈ ಸಂದರ್ಭ ಹಲವು ಬೈಂದೂರು ಭಾಗದ ವಿವಿಧ ಸಂಘಟನೆಗಳು, ರೈತ ಹೋರಾಟ ಸಮಿತಿಯ ದೀಪಕ್ ಶೆಟ್ಟಿ, ಅರುಣ್ ಕುಮಾರ್, ವೀರಭದ್ರ ಗಾಣಿಗ ಮುಖಂಡತ್ವದಲ್ಲಿ ಸಾವಿರಾರು ರೈತರು ಧರಣಿಯಲ್ಲಿ ಭಾಗವಹಿಸುತ್ತಿದ್ದಾರೆ.

