ರಾಜ್ಯ ಸರಕಾರವು ಕರ್ನಾಟಕ ಕ್ರೀಡಾ ಪ್ರಾಧಿಕಾರದಡಿ,ಕರ್ನಾಟಕ ರಾಜ್ಯ ಕಂಬಳ ಅಸೋಸಿಯೇಷನ್ ರಚಿಸಿ ಅಧಿಕೃತ ಕ್ರೀಡಾ ಮಾನ್ಯತೆ ನೀಡಿದೆ. ಈ ಮೂಲಕ ಕರುನಾಡಿನ ಜಾನಪದ ಸಾಂಪ್ರದಾಯಕ ಕ್ರೀಡೆಯಾದ ಕಂಬಳಕ್ಕೆ ರಾಜ್ಯದ ಅಧಿಕೃತ ಮಾನ್ಯತೆ ದೊರೆತಂತಾಗಿದೆ.
ರಾಜ್ಯ ಕಂಬಳ ಅಸೋಸಿಯೇಷನ್‌ಗೆ 3 ವರ್ಷದ ಅವಧಿ ಅಥವಾ ಮುಂದಿನ ಆದೇಶದವರೆಗೆ ಮಾನ್ಯತೆ ನೀಡಲಾಗಿದೆ. ಅಸೋಸಿಯೇಷನ್ ಪ್ರತಿವರ್ಷ ಜೂ.30ರೊಳಗೆ ಕಾರ್ಯಚಟುವಟಿಕೆಗಳ ಆಡಳಿತ ವರದಿ, ವಾರ್ಷಿಕ ವಹಿವಾಟುವಿನ ಆಡಿಟ್ ವರದಿ, ವಾರ್ಷಿಕ ಸಾಮಾನ್ಯ ಸಮಿತಿ ಮತ್ತು ಕಾರ್ಯಕಾರಿ ಸಮಿತಿ ಸಭೆಗಳ ನಡಾವಳಿ ಪ್ರತಿ, ಕ್ಯಾಲೆಂಡ್ ಆಫ್ ಇವೆಂಟ್, ಸಂಘಗಳ ನೋಂದಣಿ ಕಾಯಿದೆ 1960ರಡಿ ಸಕ್ಷಮ ಪ್ರಾಧಿಕಾರದಿಂದ ರಾಜ್ಯ ಕಂಬಳ ಅಸೋಸಿಯೇಷನ್ ನವೀಕರಿಸಿರುವ ಪ್ರತಿ ಒದಗಿಸಲು ಆದೇಶದಲ್ಲಿ ತಿಳಿಸಲಾಗಿದೆ.
ಸೂಚನೆಗಳನ್ನು ಆದೇಶಗಳನ್ನು ಪಾಲಿಸಬೇಕೆಂದು ಆದೇಶದಲ್ಲಿ ತಿಳಿಸಲಾಗಿದೆ.
15ರಂದು ಬೆಂಗಳೂರಿನಲ್ಲಿ ಸಭೆ ನಡೆಯಲಿದ್ದು ಕಂಬಳ ಅಸೋಸಿಯೇಷನ್ ಅಧಿಕೃತವಾಗಿ ಘೋಷಣೆಯಾಗಲಿದ್ದು, ಕ್ರೀಡಾ ಇಲಾಖೆ ಪ್ರಧಾನ ಕಾರ್ಯದರ್ಶಿ ನೇತೃತ್ವದಲ್ಲಿ ಮೊದಲ ಹಂತದ ಸಭೆ ನಡೆಯಲಿದೆ.
ಈ ಸಭೆಯಲ್ಲಿ ಕಂಬಳ ಅಸೋಸಿಯೇಷನ್‌ನ ಬೈಲಾದ ಕರಡು ಪ್ರತಿ ಅನುಮೋದನೆ ಸಿಗಲಿದೆ. ಇದು ಮಾತ್ರವಲ್ಲದೆ ಅಸೋಸಿಯೇಷನ್ ಜವಾಬ್ದಾರಿ, ಅನುದಾನ, ಪದಾಧಿಕಾರಿಗಳ ಕಾರ್ಯವ್ಯಾಪ್ತಿ, ಕಂಬಳ ಆಯೋಜನೆ ಹಾಗೂ ಇತರ ವಿಷಯಗಳ ಕುರಿತು ಸಮಿತಿ ಸಭೆಯಲ್ಲಿ ನಿರ್ಣಯವಾಗಲಿದೆ ಎಂದು ತಿಳಿದುಬಂದಿದೆ
ಗೌರವ ಸಲಹೆಗಾರರಾಗಿ ಡಾ.ಜೀವಂಧರ್ ಬಲ್ಲಾಳ್ ಕಾಂತಾವರ, ಜೀವನ್‌ದಾಸ್ ಅಡ್ಯಂತಾಯ ಮಿಯಾರು, ಕೆ.ಗುಣಪಾಲ್ ಕಡಂಬ ಕಾರ್ಕಳ. ಉಪಾಧ್ಯಕ್ಷರಾಗಿ: ನವೀನ್‌ಚಂದ್ರ ಆಳ್ವತಿರುವೈಲುಗುತ್ತು ವಾಮಂಜೂರು,ಕಾರ್ಯದರ್ಶಿಯಾಗಿ ವಿಜಯ ಕುಮಾರ್ ಕಂಗಿನಮನೆ ಕಾರ್ಕಳ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಚಂದ್ರಹಾಸ್ ಅನಿಲ್ ಮೂಡುಬಿದಿರೆ, ಲೋಕೇಶ್ ಶೆಟ್ಟಿ ಮುಳ್ಳೂರು, ಭಾಸ್ಕರ್ ಕೋಟ್ಯಾನ್ ಕಾರ್ಕಳ.
ಸಮಿತಿ ಸದಸ್ಯರುಗಳಾಗಿ : ಸುಕುಮಾರ್ ಶೆಟ್ಟಿ ಕೊಂಡೆಟ್ಟು, ಪಿ.ಆರ್.ಶೆಟ್ಟಿ ಮಂಗಳೂರು, ರೋಹಿತ್ ಕುಮಾರ್ ಹೆಗ್ಡೆ ಎರ್ಮಾಳ್, ಶ್ರೀಕಾಂತ್ ಭಟ್ ಮಣಿಪಾಲ, ಶಾಂತಾರಾಮ ಶೆಟ್ಟಿ ಬಾರಕೂರು, ಚಂದ್ರಹಾಸ ಶೆಟ್ಟಿ ಪುತ್ತೂರು, ಪಿಯೂಸ್ ರೊಡ್ರಿಗಸ್ ಬಂಟ್ವಾಳ, ಉದಯಕುಮಾರ್ ಶೆಟ್ಟಿ ಕಾರ್ಕಳ, ಸುಧಾಕರ ಹೆಗ್ಡೆ ಹೆರಾಜೆ, ಅನಿಲ್ ಶೆಟ್ಟಿ ಜಪ್ಪಿನಮೊಗರು, ಪ್ರಶಾಂತ್ ಕಾಜವ ಬಂಟ್ವಾಳ, ಅರುಣ್ ಕುಮಾರ್ ಶೆಟ್ಟಿ ಬಜಪೆ ಆಯ್ಕೆಯಾಗಿದ್ದು
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ನಿಯಮಗಳಿಗೆ ಒಳಪಟ್ಟು ಕಾರ್ಯ ನಿರ್ವಹಿಸಲಿದೆ

