
ಬೀದಿ ನಾಯಿಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ರಸ್ತೆಯಲ್ಲಿ ಸಂಚರಿಸುವವರಿಗೂ ಆತಂಕದ ಪರಿಸ್ಥಿತಿ ಉಂಟಾಗಿದೆ. ಬೀದಿನಾಯಿಗಳ ವಿಪರೀತ ಸಂಖ್ಯೆಯಿಂದಾಗಿ ಪರಸ್ಪರ ಕಚ್ಚಾಡಿ ಆರೋಗ್ಯಕ್ಕೆ ಹಾನಿಯಾಗುತ್ತಿದೆ. ಈ ಸಂತಾನ ಶಕ್ತಿ ಹರಣ ಶಸ್ತ್ರ ಚಿಕಿತ್ಸೆಯ ಮೂಲಕ ಬೀದಿ ನಾಯಿಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಲಿದೆ
ಇಂತಹ ಕಾರ್ಯಕ್ರಮ ಎಲ್ಲಡೆಯೂ ನಡೆಯುತ್ತಿರಬೇಕು ಎಂದು ನಿವೃತ್ತ ಪಶು ವೈದ್ಯಾಧಿಕಾರಿ ಡಾ. ಶಂಕರ್ ಶೆಟ್ಟಿ ಹೇಳಿದರು
ಮಧ್ವರಾಜ್ ಪ್ರಾಣಿ ಆರೈಕೆ ಟ್ರಸ್ಟ್ ಮಲ್ಪೆ, ವರ್ಲ್ಡ್ ವೈಡ್ ವೆಟರ್ನರಿ ಸರ್ವಿಸ್ ಇಂಡಿಯಾ, ಫ್ರೋಡೋ ಫೌಂಡೇಶನ್, ರೋಟರಿ ಕ್ಲಬ್ ಬೈಂದೂರು, ಇನ್ನರ್ವಿಲ್ ಕ್ಲಬ್ ಸಂಯುಕ್ತ ಆಯೋಜನೆಯ ದೇಶಿ ತಳಿಯ ಸಾಕು ನಾಯಿಗಳಿಗೆ ಉಚಿತ ಸಂತಾನ ಶಕ್ತಿ ಹರಣ ಚಿಕಿತ್ಸಾ ಶಿಬಿರಕ್ಕೆ ಸಪ್ಟೆಂಬರ್ 10ರಂದು ರೋಟರಿ ಕ್ಲಬ್ ಬೈಂದೂರಿನಲ್ಲಿ ಚಾಲನೆ ನೀಡಿದರು.
ರೋಟರಿ ಕ್ಲಬ್ ಬೈಂದೂರು ಅಧ್ಯಕ್ಷ ಸುಬ್ರಮಣ್ಯ ಜಿ ಉಪ್ಪುಂದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಹಾಯಕ ಗವರ್ನರ್ ಐ ನಾರಾಯಣ್, ಇನ್ನರ್ವಿಲ್ ಅಧ್ಯಕ್ಷೆ ಶಾರದಾ ಕೆ, ಚೈತ್ರಾ, ಪಟ್ಟಣ ಪಂಚಾಯತ್ ಸಂತೋಷ್ ಮತ್ತು ರವಿರಾಜ್, ವರ್ಡ್ ವೈಡ್ ವೆಟರ್ನರಿ ಸರ್ವಿಸ್ ಇಂಡಿಯಾದ ಡಾ| ಪ್ರದೀಪ್, ಫ್ರೋಡೊ ಫೌಂಡೇಶನ್ ಶ್ವೇತ ಆರ್ ಎಂ, ತೇಜಸ್ವಿನಿ ಮುಂಜುಷಾ ಸ್ವಾನಪ್ರಿಯೆ ನಿರ್ಮಲಾ ಮೊದಲಾದವರು ಉಪಸ್ಥಿತರಿದ್ದರು.
ಸೆಪ್ಟೆಂಬರ್ 14ರವರೆಗೆ ಈ ಶಸ್ತ್ರ ಚಿಕಿತ್ಸೆ ಹಾಗೂ ಲಸಿಕೆ ಸೌಲಭ್ಯದ ಶಿಬಿರವನ್ನು ಮುಂದುವರಿಸಿ ನಾಯಿಗಳ ನೋಂದಣಿಗೆ ಇನ್ನೂ ಕೆಲವು ಅವಕಾಶ ಕಲ್ಪಿಸಲಾಗಿದೆ.

