ಕೊಲ್ಲೂರು ದೇಗುಲಕ್ಕೆ ವಜ್ರ ಖಚಿತ ಕಿರೀಟ ಸಹಿತ ಆಭರಣ ಸಮರ್ಪಣೆ
ದಕ್ಷಿಣ ಭಾರತದ ಪ್ರಮುಖ ಯಾತ್ರಾ ಸ್ಥಳಗಳಲ್ಲಿ ಒಂದಾದ ಕೊಲ್ಲೂರು ಶ್ರೀ ಮೂಕಾಂಬಿಕಾ ದೇಗುಲಕ್ಕೆ ದೇಶದ ಖ್ಯಾತ ಹಿನ್ನಲೆ ಸಂಗೀತ ನಿರ್ದೇಶಕ ಇಳಯರಾಜ್ ಅವರು ದೇವರಿಗೆ ಸುಮಾರು 4 ಕೋಟಿ ರೂ. ಮೌಲ್ಯದ ವಜ್ರ ಖಚಿತ ಕಿರೀಟ ಸಹಿತ ಆಭರಣಗಳು ಹಾಗೂ ವೀರಭದ್ರ ದೇವರಿಗೆ ರಜತ ಕಿರೀಟ ಸಹಿತ ಖಡ್ಗವನ್ನು ಸೇವಾ ರೂಪದಲ್ಲಿ ಸಮರ್ಪಿಸಿದರು

