ಬೈಂದೂರು ತಾಲೂಕಿನಾದ್ಯಂತ ಹಾಗೂ ಹಾಗೂ ಸ್ಥಳೀಯ ವಿದ್ಯಾಸಂಸ್ಥೆಗಳಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಮತ್ತು ಸಡಗರದಿಂದ ಆಚರಿಸಲಾಗಿದೆ.
ಎಲ್ಲ ಗ್ರಾಮಮಟ್ಟದಲ್ಲಿ ವಿಶೇಷ ರೀತಿಯಲ್ಲಿ ಊರಿನ ನಾಗರಿಕರೆಲ್ಲರೂ ಸೇರಿ ತಮ್ಮ ತಮ್ಮ ಕಾರ್ಯ ಕ್ಷೇತ್ರದಲ್ಲಿ ಹಾಗೂ ಸ್ಥಳೀಯ ಸಂಸ್ಥೆಗಳಲ್ಲಿ ಹಾಗೆ ಮನೆ ಮನೆಗಳಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸುವುದರ ಮುಖೇನ ಸ್ವಾತಂತ್ರ್ಯೋತ್ಸವದ 80ನೇ ವರ್ಷಕ್ಕೆ ಪಾದಾರ್ಪಣೆಗೊಂಡಿರುವ ಈ ಸುದಿನವನ್ನು ವಿಶೇಷವಾಗಿ ಸಂಭ್ರಮಿಸಿದರು.






