ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ನೂತನ ಸಚಿವ ಸಂಪುಟದ ಪ್ರಮಾಣವಚನ ಸ್ವೀಕಾರ ಸಮಾರಂಭ ಇಂದು (ಸೋಮವಾರ) ಸಂಜೆ 4.05 ಗಂಟೆಗೆ ನಡೆಯಲಿದೆ ಎಂದು ಲೋಕಭವನ ಮೂಲಗಳು ತಿಳಿಸಿವೆ.
ಲೋಕಭವನದ ಗಾಜಿನ ಮನೆಯಲ್ಲಿ ನೂತನ ಸಚಿವರ ಪ್ರಮಾಣವಚನ ಕಾರ್ಯಕ್ರಮ ನಡೆಯಲಿದ್ದು, ಸಮಾರಂಭಕ್ಕೆ ಅಗತ್ಯವಿರುವ ಎಲ್ಲ ಸಿದ್ಧತೆಗಳನ್ನು ಈಗಾಗಲೇ ಪೂರ್ಣಗೊಳಿಸಲಾಗಿದೆ. ಕಾರ್ಯಕ್ರಮಕ್ಕೆ ಆಗಮಿಸುವ ಗಣ್ಯರು ಹಾಗೂ ಅತಿಥಿಗಳಿಗಾಗಿ ಹೊರಭಾಗದಲ್ಲಿ ಜರ್ಮನ್ ಟೆಂಟ್ ಅಳವಡಿಸಲಾಗಿದ್ದು, ಲೋಕೋಪಯೋಗಿ ಇಲಾಖೆಯು ಮೂರು ದಿನಗಳ ಹಿಂದೆಯೇ ಸಿದ್ಧತಾ ಕಾರ್ಯಗಳನ್ನು ಆರಂಭಿಸಿದೆ. ಭದ್ರತಾ ದೃಷ್ಟಿಯಿಂದ ಸುಮಾರು 2,000 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಲೋಕಭವನ ಸುತ್ತಮುತ್ತ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿದೆ.
ನೂತನ ಸಚಿವರ ಪಟ್ಟಿ ಇಲ್ಲಿದೆ
| ಕ್ರ.ಸಂ. | ನೂತನ ಸಚಿವರ ಹೆಸರು |
| 1 | ಪಿ. ಎಂ. ನರೇಂದ್ರಸ್ವಾಮಿ |
| 2 | ಶಿವರಾಜ್ ತಂಗಡಗಿ |
| 3 | ರುದ್ರಪ್ಪ ಲಮಾಣಿ |
| 4 | ಕೆ. ಎಸ್. ಬಸವಂತಪ್ಪ |
| 5 | ಬಿ. ನಾಗೇಂದ್ರ |
| 6 | ಟಿ. ರಘುಮೂರ್ತಿ |
| 7 | ಬಿ. ಝಡ್. ಝಮೀರ್ ಅಹಮದ್ ಖಾನ್ |
| 8 | ರಿಜ್ವಾನ್ ಅರ್ಷದ್ |
| 9 | ಸಂತೋಷ್ ಲಾಡ್ |
| 10 | ಮಧು ಬಂಗಾರಪ್ಪ |
| 11 | ಪುಟ್ಟರಂಗಶೆಟ್ಟಿ |
| 12 | ಎಸ್ಎಸ್ ಮಲ್ಲಿಕಾರ್ಜುನ |
| 13 | ಡಾ. ಅಜಯ್ ಸಿಂಗ್ |
| 14 | ಎನ್. ಚಲುವರಾಯ ಸ್ವಾಮಿ |
| 15 | ಕೆ. ಎಂ. ಶಿವಲಿಂಗೇ ಗೌಡ |
| 16 | ಎಚ್. ಸಿ. ಬಾಲಕೃಷ್ಣ |
| 17 | ಗಾಯತ್ರಿ ಶಾಂತೇಗೌಡ |
| 18 | ಬಸವರಾಜ ರಾಯರೆಡ್ಡಿ |
| 19 | ವಿಜಯಾನಂದ ಕಾಶಪ್ಪನವರ್ |
| 20 | ಲಕ್ಷ್ಮಣ ಸವದಿ |

