ರೆ.ಫಾ.ರೋಬರ್ಟ್ ಜ್ಹಡ್ ಎಮ್ ಡಿಸೋಜಾ ಸ್ಮಾರಕ ಕೈಗಾರಿಕಾ ತರಬೇತಿ ಸಂಸ್ಥೆ ನಾಡಾ ಕಾಲೇಜಿನಲ್ಲಿ ದಿನಾಂಕ 31-07-2026 ರಂದು ಸೇವಾ ನಿವೃತ್ತಿ ಹೊಂದುತ್ತಿರುವ ಕಾಲೇಜಿನ ಕೆ ಪ್ರೇಮರಾಜ್ ಶೆಟ್ಟಿ ಇವರ ಬೀಳ್ಕೊಡುಗೆ ಸಮಾರಂಭ ಜರಗಿತು

ಕಾರ್ಯಕ್ರಮದಲ್ಲಿ ಸತತ 29 ವರ್ಷಗಳಿಂದ ಸಂಸ್ಥೆಯಲ್ಲಿ ಸುಧೀರ್ಘ ಸಾರ್ಥಕ ಸೇವೆ ಸಲ್ಲಿಸಿದ ಕೆ ಪ್ರೇಮರಾಜ್ ಶೆಟ್ಟಿ ಮತ್ತು ಶ್ರೀಮತಿ ಜ್ಯೋತಿ ಶೆಟ್ಟಿ ದಂಪತಿಗಳನ್ನು ಸನ್ಮಾನಿಸಲಾಯಿತು

ಈ ಸಂದರ್ಭ ವೇದಿಕೆಯಲ್ಲಿ ಸಂಸ್ಥೆಯ ಪ್ರಾಂಶುಪಾಲರಾದ ಮನೋಹರ ಕಾಮತ್ ಕಾರ್ಯಕ್ರಮದ ಸಭಾಧ್ಯಕ್ಷತೆ ವಹಿಸಿದರು,
ಮುಖ್ಯ ಅತಿಥಿಗಳಾಗಿ ಸಂಸ್ಥೆಯ ಆಡಳಿತ ಮಂಡಳಿ ಕಾರ್ಯದರ್ಶಿ ನವೀನ್ ಲೋಬೊ, ಬ್ಯಾಂಕ್ ಆಫ್ ಬರೋಡಾ ನಾಡಾ ಶಾಖೆಯ ವ್ಯವಸ್ಥಾಪಕ ಪರಮಶಿವಂ.ಕೆ ಹಾಗೂ ಅನಿತಾ ಲೋಬೊ,ಸಂಸ್ಥೆಯ ಸಿಬ್ಬಂದಿಗಳು, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು

ಕಾರ್ಯಕ್ರಮದಲ್ಲಿ ವಿನಾಯಕ ಕಾಮತ್ ಪ್ರಾರ್ಥನೆಗೈದರು, ಕಿರಿಯ ತರಬೇತಿ ಅಧಿಕಾರಿ ರಾಘವೇಂದ್ರ ಆಚಾರ್ಯ ಸ್ವಾಗತಿಸಿದರು. ಡೆಬ್ರಿಲ್ ಪೆಟ್ರಿಷಿಯಾ ಫೆರ್ನಾಂಡಿಸ್ ವಂದಿಸಿದರು. ಕಿಶೋರ್ ಸಸಿಹಿತ್ಲು ಕಾರ್ಯಕ್ರಮ ನಿರ್ವಹಿಸಿದರು.

URL has been copied successfully!

Discover more from BYNDOOR XPRESS

Subscribe now to keep reading and get access to the full archive.

Continue reading