ದ.ಕ ಜಿಲ್ಲೆಯ 23 ಕಂಬಳಗಳಿಗೆ ಒಟ್ಟು 1.15 ಕೋಟಿ ರೂ. ಬಿಡುಗಡೆಯಾಗಿದ್ದು.ಕರ್ನಾಟಕ ಸರಕಾರದ ಪ್ರವಾಸೋದ್ಯಮ ಇಲಾಖೆಯ ಮೂಲಕ ಈ ಅನುದಾನ ಬಿಡುಗಡೆಯಾಗಿದೆ.
ದ ಕ ಮತ್ತು ಉಡುಪಿ ಜಿಲ್ಲೆಯ ಸುಮಾರು 23 ಕಂಬಳ ಕ್ಕೆ ಒಟ್ಟು 1.15 ಕೋಟಿ ಅನುದಾನ ಮಂಜೂರಾಗಿದೆ. ಕಂಬಳಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಈ ಅನುದಾನ ನೀಡಲಾಗಿದೆ. ಮೈಸೂರು ದಸರಾದಲ್ಲಿ ಕಂಬಳ ಆಯೋಜನೆಗೆ ಸಿದ್ಧತೆ ನಡೆಸುತ್ತಿರುವಾಗಲೇ ಈ ಅನುದಾನ ಮಂಜೂರುಗೊಂಡಿರುವುದು ಕಂಬಳಾಭಿಮಾನಿಗಳಿಗೆ ಅತ್ಯಂತ ಸಂತಸವನ್ನು ತಂದಿದೆ.

