ಬೈಂದೂರಿನಲ್ಲಿ ವಿವಿಧ ತಳಿಯ ಹಲಸು ಮತ್ತು ಮಾವು ಮೇಳ, ಗುಡಿ ಕೈಗಾರಿಕೆ ಮತ್ತು ಸ್ವದೇಶಿ ವಸ್ತುಗಳ ಮೇಳ, ಕೃಷಿ ಉತ್ಪನ್ನಗಳ ಮೇಳ, ಆಯುರ್ವೇದಿಕ ಉತ್ಪನ್ನಗಳು ಹಾಗೂ ಆಹಾರ ಮೇಳವನ್ನು ರೋಟರಿ ಕ್ಲಬ್ ಬೈಂದೂರು, ಬೈಂದೂರು ಉತ್ಸವ ಸಮಿತಿ, ಕಂಬದ ಕೋಣೆ ರೈತರ ಸೇವಾ ಸಹಕಾರಿ ಸಂಘ ಉಪ್ಪುಂದ, ಶ್ರೀ ವರಲಕ್ಷ್ಮಿ ಚಾರಿಟೇಬಲ್ ಟ್ರಸ್ಟ್ ರಿ ಉಪ್ಪುಂದ, ಸಮಷ್ಠಿ ಪ್ರತಿಷ್ಠಾನ ಇವರ ಸಹಕಾರದೊಂದಿಗೆ ರೈತ ಬಳಗ ಆಯೋಜಿಸುವ ಬೈಂದೂರಿನಲ್ಲಿ ದ್ವಿತೀಯ ವರ್ಷದ ಹಲಸು ಮತ್ತು ಕೃಷಿ ಮೇಳ ಮೇ 29 ಶುಕ್ರವಾರ ದಿಂದ ಆರಂಭವಾಗಿ ಮೇ 31 ಭಾನುವಾರದ ತನಕ 3 ದಿನಗಳ ಕಾಲ ಬೆಳಿಗ್ಗೆ ಗಂಟೆ 10ರಿಂದ ರಾತ್ರಿ ಗಂಟೆ 10ರ ತನಕ ಬೈಂದೂರಿನ ಯಡ್ತರೆ ಜೆ ಎನ್ ಆರ್ ಕಲಾಮಂದಿರದಲ್ಲಿ ನಡೆಯಲಿರುವುದು.
ಇಲ್ಲಿ ಹಲಸು ಮಾವಿನ ಗಿಡಗಳು ಹೂವಿನ ಗಿಡಗಳು ತರಕಾರಿ ಬೀಜಗಳು ಮತ್ತು ಅನೇಕ ಗಿಡಗಳು ದೊರೆಯುತ್ತದೆ.
ಹಾಗೆ ಹಲಸಿನ ಉತ್ಪನ್ನಗಳಾದ ಹಲಸಿನ ಪೋಡಿ, ಹಲಸಿನ ಕಡಬು, ಹಲಸಿನ ಕಬಾಬ್, ಹಲಸಿನ ಚಿಲ್ಲಿ, ಹಲಸಿನ ಪತ್ರೋಡಿ, ಹಲಸಿನ ಹೋಳಿಗೆ, ಹಲಸಿನ ಐಸ್ ಕ್ರೀಮ್ ಹೀಗೆ ಹತ್ತು ಹಲವು ವಿಶೇಷ ಖಾದ್ಯಗಳು ಲಭ್ಯವಿರಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

