ಗಂಗೋಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಮರವಂತೆ ಬೀಚ್ ಬಳಿ ದಿನಾಂಕ: 29/04/2026 ರಂದು ಬಸ್, ಟ್ಯಾಂಕರ್ ಹಾಗೂ ಟ್ರಕ್ ವಾಹನಗಳ ಮಧ್ಯೆ ಸಂಭವಿಸಿದ ಭೀಕರ ರಸ್ತೆ ಅಪಘಾತ ಸಂಬಂಧ ಗಂಗೋಳ್ಳಿ ಪೊಲೀಸ್ ಠಾಣೆ ಅ.ಕ್ರ. 22/2026 ಕಲಂ 281,125(a),106 ರಂತೆ ಪ್ರಕರಣ ದಾಖಲಾಗಿರುತ್ತದೆ.
ಸದರಿ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳ ಪರಿಶೀಲನೆ ನಡೆಸುವ ಕುರಿತು ಆರ್‌ಟಿಓ ಅಧಿಕಾರಿ, ಎನ್‌ಎಚ್‌ಎಐ ಅಧಿಕಾರಿ ಹಾಗೂ ಬೈಂದೂರು ಪೊಲೀಸ್ ವೃತ್ತ ನಿರೀಕ್ಷಕರಾದ ಶಿವಕುಮಾರ ರವರು ಅಪಘಾತ ಸ್ಥಳಕ್ಕೆ ಭೇಟಿ ನೀಡಿ Spot Joint Inspection ನಡೆಸಲಾಗಿದೆ.

ಪರಿಶೀಲನೆ ವೇಳೆ ಅಪಘಾತ ತಡೆಗಟ್ಟುವ ಉದ್ದೇಶದಿಂದ ಕೆಳಕಂಡ ರಸ್ತೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಿ ಅಗತ್ಯ ಕ್ರಮ ಜರುಗಿಸಲಾಗಿದೆ.
- No Parking Board ಅಳವಡಿಕೆ
- Speed Limit Board ಅಳವಡಿಕೆ
- Reflector Board ಅಳವಡಿಕೆ
- Accident Zone Board ಅಳವಡಿಕೆ
ಹಾಗೂ ವಾಹನ ಸವಾರರ ಸುರಕ್ಷತೆ ಹಾಗೂ ಅಪಘಾತ ನಿಯಂತ್ರಣದ ದೃಷ್ಟಿಯಿಂದ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ.


