ಎನ್.ಎನ್.‌ ಗ್ರೂಪ್‌ ಬೆಂಗಳೂರು ಇದರ ಪ್ರವರ್ತಕ ಹಾಗೂ ಸಮಾಜ ಸೇವಕ ನಿತಿನ್‌ ನಾರಾಯಣ ಅವರು ಸಮಾರೋಪ ಸಮಾರಂಭದ ಉದ್ದೇಶಿಸಿ ಮಾತನಾಡಿ, ಜಾತ್ರೆಗಳು ಮತ್ತು ಉತ್ಸವಗಳು ಸಮಾಜದಲ್ಲಿ ಏಕತೆ, ಸೌಹಾರ್ದತೆ ಮತ್ತು ಸಂಸ್ಕೃತಿಯ ಮೌಲ್ಯಗಳನ್ನು ಉಳಿಸಿ ಬೆಳೆಸುವ ಪ್ರಮುಖ ವೇದಿಕೆಗಳಾಗಿವೆ. ಗ್ರಾಮೀಣ ಭಾಗಗಳಲ್ಲಿ ಇಂತಹ ಆಚರಣೆಗಳು ಜನರ ಬದುಕಿನ ಅಂಗವಾಗಿದ್ದು, ಪರಸ್ಪರ ಬಾಂಧವ್ಯವನ್ನು ಗಟ್ಟಿಗೊಳಿಸುತ್ತವೆ. ಸಂಘಸಂಸ್ಥೆಗಳು ಕಲಾಸಂಸ್ಥೆಗಳನ್ನು ಬೆಳೆಸುವಂತಹ ಕೆಲಸ ಮಾಡಬೇಕು. ಸಂಘ ಸಂಸ್ಥೆಗಳೆಲ್ಲ ಸೇರಿ ಕಲಾ ಸಂಸ್ಥೆಗಳನ್ನು ಬೆಳೆಸುವ ಕೆಲಸವು ಆಗಬೇಕು ಎಂದರು.

ಮಹತೋಭಾರ ಶ್ರೀ ಸೇನೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಗಿರೀಶ್‌ ಬೈಂದೂರು, ಯುವ ಉದ್ಯಮಿ ಗಜೇಂದ್ರ ಎಸ್‌ ಬೇಲೆಮನೆ ಪಡುವರಿ, ಶ್ರೀದೇವಿ ಕಂಗನ್‌ & ಸಿಲ್ವರ್‌ ಸ್ಟೋರ್ಸ್‌ ಕುಂದಾಪುರ ಪ್ರವರ್ತಕ ಗಣೇಶ್‌ ಜೋಗಿ ಕುಂದಾಪುರ, ಅಶೋಕ್‌ ಜ್ಯುವೆಲ್ಲರ್ಸ್‌ ಉಪ್ಪುಂದ ಮಾಲೀಕರು ಹಾಗೂ ಬೈಂದೂರು ತಾಲೂಕು ದೈವಜ್ಞ ಮಹಿಳಾ ಸಮಿತಿಯ ಅಧ್ಯಕ್ಷೆ ವಿದ್ಯಾ ಅಶೋಕ್‌ ಶೇಟ್‌ ಉಪ್ಪುಂದ, ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಮ್ಯೂಸಿಕಲ್‌ ಪಬ್ಲಿಸಿಟಿ ಬೈಂದೂರು ಸಂಚಾಲಕ ಹರೇಗೋಡು ಸುಶಾಂತ್‌ ಆಚಾರ್‌ ಬೈಂದೂರು ಸ್ವಾಗತಿಸಿದರು. ಮ್ಯೂಸಿಕಲ್‌ ಪಬ್ಲಿಸಿಟಿ ಬೈಂದೂರು ಕಾರ್ಯಕ್ರಮ ಸಂಯೋಜಕ ಕಿರಣ್‌ ಬಿಜೂರು ಕಾರ್ಯಕ್ರಮ ನಿರೂಪಿಸಿದರು. ಮ್ಯೂಸಿಕಲ್‌ ಪಬ್ಲಿಸಿಟಿ ಬೈಂದೂರು ಗೌರವ ಸಲಹೆಗಾರ ಕಿಶೋರ್‌ ಪೂಜಾರಿ ಸಸಿಹಿತ್ಲು ವಂದಿಸಿದರು. ಮ್ಯೂಸಿಕಲ್‌ ಪಬ್ಲಿಸಿಟಿ ಬೈಂದೂರು ಸದಸ್ಯರಾದ ಸೂರ್ಯಕಾಂತಿ ನಾಗೇಶ್‌, ಜ್ಯೋತಿ ಜಯರಾಮ್‌ ಶೆಟ್ಟಿ ಶಿರೂರು, ನಾಗರತ್ನ ದೇವಾಡಿಗ ಸಹಕರಿಸಿದರು.

ಬಳಿಕ ಅಶೋಕ್‌ ಜ್ಯುವೆಲ್ಲರ್ಸ್‌ ಉಪ್ಪುಂದ ಅರ್ಪಿಸುವ ಕುಟುಂಬೋತ್ಸವ (ಆದರ್ಶ ದಂಪತಿ) ಕಾರ್ಯಕ್ರಮ ಖ್ಯಾತ ನಿರೂಪಕರಾದ ಅಕ್ಷತಾ ಗಿರೀಶ್‌ ಐತಾಳ್‌ ಮತ್ತು ನಾಗರಾಜ್‌ ಸಂಜನಾ ಭಟ್ಕಳ ನಡೆಸಿದರು.

ಆದರ್ಶ ದಂಪತಿ ಸ್ಪರ್ಧೆಯ ವಿಜೇತರು : ಪ್ರಥಮ ಬಹುಮಾನ – ರೂಪಾ ಅಜೀತ್‌ ಬಿಜೂರು, ದ್ವಿತೀಯ ಬಹುಮಾನ – ಶ್ವೇತಾ ವಾಸುದೇವ ಆಚಾರ್ಯ ಸಾಲಿಮಕ್ಕಿ ಉಪ್ಪುಂದ, ತೃತೀಯ ಬಹುಮಾನ – ಗಿರೀಶ್‌ ಪ್ರಭು ಉಪ್ಪುಂದ, ಸಮಧಾನಕರ ವಿಜೇತರಾದ – ಶೋಭಾ ರಾಘವೇಂದ್ರ ಖಾರ್ವಿ ಕೊಡೇರಿ, ಸುಪ್ರೀತಾ ರಾಘವೇಂದ್ರ ತೊಂಡೆಮಕ್ಕಿ ಬೈಂದೂರು ಬಹುಮಾನ ಪಡೆದುಕೊಂಡಿದ್ದಾರೆ.

URL has been copied successfully!

Discover more from BYNDOOR XPRESS

Subscribe now to keep reading and get access to the full archive.

Continue reading