ದಿನಾಂಕ ಮಾರ್ಚ್ 5 2026ರಂದು ಹಗಲು ವೇಳೆ ಬೈಂದೂರು ಸೋಮೇಶ್ವರ ರಸ್ತೆಯಲ್ಲಿರುವ ಪಡುವರಿ ಗ್ರಾಮದ ಗುರುಕಿರಣ್ ಪಟ್ವಾಲ್ ಇವರ ಮನೆಯಲ್ಲಿ ಯಾರು ಇಲ್ಲದ ಸಮಯ ಹಗಲಿನಲ್ಲಿ ಮನೆಯ ಬಾಗಿಲನ್ನು ಮುರಿದು ಮನೆ ಒಳಗೆ ಇರಿಸಿದ್ದ ಚಿನ್ನಾಭರಣಗಳು ಮತ್ತು ನಗದು ಕಳುವು ಮಾಡಿದ್ದು ಈ ಬಗ್ಗೆ ಬೈಂದೂರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಈ ಪ್ರಕರಣದ ತನಿಖೆಯನ್ನು ಬೈಂದೂರು ವೃತ್ತ ನಿರೀಕ್ಷಕರಾದ ಶಿವಕುಮಾರ್ ಬಿ ಇವರು ನಡೆಸುತ್ತಿದ್ದು, ಈ ಕೃತ್ಯದಲ್ಲಿ ಭಾಗಿಯಾದ ಅಂತರಾಜ್ಯ ಕಳ್ಳನಾಗಿರುವ ಉಮೇಶ್ ಪಿ ಈತನ ಪತ್ತೆಗಾಗಿ ಬೈಂದೂರು ವೃತ್ತದ ಪಿಎಸ್ಐ ಮತ್ತು ಸಿಬ್ಬಂದಿ ಯವರನ್ನು ಒಳಗೊಂಡ ವಿಶೇಷ ತಂಡವನ್ನು ರಚಿಸಿದ್ದು ಈ ವಿಶೇಷ ತಂಡವು ಏಪ್ರಿಲ್ 21 2026ರಂದು ಆರೋಪಿಯನ್ನು ಪತ್ತೆ ಮಾಡಿ ಬಂಧಿಸಲಾಗಿರುತ್ತದೆ. ತನಿಖೆ ಸಮಯ ಅಪಾದಿತನು ತಾನು ಕಳುವು ಮಾಡಿದ ಚಿನ್ನಾಭರಣಗಳನ್ನು ತಮಿಳುನಾಡು ಮಧುರೈ ಮಾರಾಟ ಮಾಡುವುದಕ್ಕಾಗಿ ಗಟ್ಟಿ ಮಾಡಿಸಿ ಬಚ್ಚಿಟ್ಟಿರುವುದಾಗಿ ತಿಳಿಸಿರುವ ಮೇರೆಗೆ ತನಿಖಾಧಿಕಾರಿ ಶಿವಕುಮಾರ್ ಬಿ ವ್ರತ್ತ ನಿರೀಕ್ಷಕರು ಬೈಂದೂರು ಇವರು ತಂಡದೊಂದಿಗೆ ತಮಿಳುನಾಡು ಮಧುರೈ ಗೆ ಹೋಗಿ ಆರೋಪಿಯಿಂದ ಸುಮಾರು 2.81 ಲಕ್ಷ ಮೌಲ್ಯದ ಒಟ್ಟು 22 ಗ್ರಾಮ್ ಚಿನ್ನದ ಗಟ್ಟಿಯನ್ನು ಸ್ವಾಧೀನಪಡಿಸಿಕೊಂಡು ಬಂದಿರುತ್ತಾರೆ.
ಈ ಕಾರ್ಯಾಚರಣೆಯನ್ನು ಮಾನ್ಯ ಉಡುಪಿ ಜಿಲ್ಲೆಯ ಪೊಲೀಸ್ ಅಧಿಕ್ಷಕರಾದ ಶ್ರೀ ಹರಿರಾಮ್ ಶಂಕರ್ ಐಪಿಎಸ್ ಇವರ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ ಸುಧಾಕರ್ ನಾಯಕ್ ಉಡುಪಿ ಜಿಲ್ಲೆ ಇವರ ನಿರ್ದೇಶನದಂತೆ ಮತ್ತು ಶ್ರೀ ಎಚ್ ಡಿ ಕುಲಕರ್ಣಿ ಪೊಲೀಸ್ ಉಪಾಧೀಕ್ಷಕರು, ಕುಂದಾಪುರ ಉಪವಿಭಾಗ ರವರ ಮಾರ್ಗದರ್ಶನದಲ್ಲಿ ನಡೆಸಲಾಗಿರುತ್ತದೆ. ಈ ಕಾರ್ಯಾಚರಣೆಯನ್ನು ಶಿವಕುಮಾರ್ ಬಿ ಸಿಪಿಐ ಬೈಂದೂರು ಇವರ ನೇತೃತ್ವದಲ್ಲಿ ನಡೆಸಿದ್ದು ಕಾರ್ಯಾಚರಣೆಯಲ್ಲಿ ಬೈಂದೂರು ಪೊಲೀಸ್ ಠಾಣೆಯ ಪಿಎಸ್ಐ ರವರಾದ ಶ್ರೀ ಸುನಿಲ್ ಕುಮಾರ್ ಬಿ ವೈ ಮತ್ತು ನವೀನ್ ಬೋರಕರ್, ಕೊಲ್ಲೂರು ಪೊಲೀಸ್ ಠಾಣೆ ಪಿಎಸ್ಐ ರವರಾದ ಭೀಮಶಂಕರ್ ಮತ್ತು ವಿನಯ್ ಕೊರ್ಲಹಳ್ಳಿ ಹಾಗೂ ಬೈಂದೂರು ಪೊಲೀಸ್ ಠಾಣೆ ಎ ಎಸ್ ಐ ಸೀತಾರಾಮ ಮತ್ತು ಸಿಬ್ಬಂದಿವರಾದ ಚಿದಾನಂದ, ಮಾಳಪ್ಪ, ದೇಸಾಯಿ, ತಿಮ್ಮಣ್ಣ ನಾಯಕ್ ಕೊಲ್ಲೂರು ಠಾಣೆಯ ಸಿಬ್ಬಂದಿಯವರಾದ ನಾಗೇಂದ್ರ ರಾಮ ಪೂಜಾರಿ ಗಂಗೊಳ್ಳಿ ಠಾಣೆ ಸಿಬ್ಬಂದಿವರಾದ ಕೃಷ್ಣ ಸಂದೀಪ್ ಕುರಾಣಿ ಹಾಗೂ ಜಿಲ್ಲಾ ಪೊಲೀಸ್ ಕಚೇರಿಯ ಬೆರಳು ಮುದ್ರೆ ವಿಭಾಗದ ಪೊಲೀಸ್ ನಿರೀಕ್ಷಕರಾದ ಎಲ್ ಮೋಹನ್ ಕುಮಾರಿ ಮತ್ತು ಸಿಬ್ಬಂದಿಯವರು ಮತ್ತು ಉಡುಪಿ ಜಿಲ್ಲಾ ಪೊಲೀಸ್ ಕಚೇರಿ ಸಿ ಡಿ ಆರ್ ವಿಭಾಗದ ಸಿಬ್ಬಂದಿ ದಿನೇಶ್ ರವರು ಸಹಕರಿಸಿರುತ್ತಾರೆ

