ಬೈಂದೂರು ಶ್ರೀ ಸೇನೇಶ್ವರ ದೇವರ ಮನ್ಮಹಾ ರಥೋತ್ಸವ ಸಂಪನ್ನ

ಬೈಂದೂರು : ಶ್ರೀ ಸೇನೇಶ್ವರ ದೇವಸ್ಥಾನದ ಮನ್ಮರಥೋತ್ಸವ ಕಾರ್ಯಕ್ರಮವು ಬೆಳಿಗ್ಗೆ ಅದ್ದೂರಿಯಿಂದ ಜರುಗಿತು.
ಶ್ರೀರಾಮ ತನ್ನ ಕಪಿಸೇನೆ ಸಮೇತನಾಗಿ ಸೀತಾನ್ವೇಷಣೆಗೆ ರಾಮೇಶ್ವರಕ್ಕೆ ತೆರಳುವ ವೇಳೆ ಇಲ್ಲಿಗೆ ಬಂದು ಬಿಂದು ಋಷಿಗಳ ಕೋರಿಕೆಯಂತೆ ಒಂದು ರಾತ್ರಿ ಬೆಳಗಾಗುವುದರೊಳಗೆ ತನ್ನ ಕಪಿಸೇನೆಯಿಂದ ನಿರ್ಮಿಸಿದ ಈ ದೇವಾಲಯಕ್ಕೆ ಶ್ರೀ ಸೇನೇಶ್ವರ ಎಂಬ ಹೆಸರು ಬಂದಿತು ಎಂಬುದು ಪೌರಾಣಿಕ ಕಥೆ.
ಪ್ರತಿ ವರ್ಷ ವೈಶಾಖ ಶುಕ್ಲ ಆರ್ಧ್ರ ನಕ್ಷತ್ರದಂದು ವಿಜೃಂಭಣೆಯ ವಾರ್ಷಿಕ ರಥೋತ್ಸವ ಶ್ರೀ ಕ್ಷೇತ್ರದಲ್ಲಿ ನಡೆಯುತ್ತದೆ.


ಶ್ರೀ ಕ್ಷೇತ್ರದಲ್ಲಿ ಜಾತ್ರಾ ಮಹೋತ್ಸವದ ಅಂಗವಾಗಿ ಅನ್ನ ಸಂತರ್ಪಣೆ ಏರ್ಪಟ್ಟಿದ್ದು ಸಾವಿರಾರು ಭಕ್ತಾದಿಗಳು ಅನ್ನ ಪ್ರಸಾದದಲ್ಲಿ ಪಾಲ್ಗೊಂಡಿದ್ದರು. ಅಧ್ಯಕ್ಷರಾದ ಗಿರೀಶ್ ಬೈಂದೂರು ಸೇರಿದಂತೆ ಎಲ್ಲಾ ಸದಸ್ಯರು ಹಾಗೆ ಊರಿನ ಹಿರಿಯರು ಶಾಸಕರು ಕಾರ್ಯಕ್ರಮದಲ್ಲಿ ಭಾಗಿ ಇದ್ದರು.

ಹಾಗೆ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ, ಸಭಾ ಕಾರ್ಯಕ್ರಮ ಮತ್ತು ಇನ್ನು ಎರಡು ದಿನಗಳ ಕಾಲ ವಿಶೇಷ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಕ್ಷೇತ್ರದಲ್ಲಿ ಜರುಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Copy link
URL has been copied successfully!

Discover more from BYNDOOR XPRESS

Subscribe now to keep reading and get access to the full archive.

Continue reading