ಬೈಂದೂರು ತಾಲೂಕು ಗೋಳಿಹೊಳೆಯಲ್ಲಿ ಜುಲೈ28ರಂದು ಆರಂಭಗೊಳ್ಳಲಿರುವ ಕನ್ಯಾಡಿ ಶ್ರೀರಾಮ ಕ್ಷೇತ್ರದ, ಮಹಾಮಂಡಲೇಶ್ವರ 1008 ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿಜೀ ಮಹಾರಾಜರ ನೇತೃತ್ವದಲ್ಲಿ ಚಾತುರ್ಮಾಸ್ಯ ವ್ರತಾಚರಣೆಯ ಯಡ್ತರೆ ಬೈಂದೂರು ಗ್ರಾಮ ಭಾಗದ ಪೂರ್ವಭಾವಿ ಸಭೆಯು ದಿನಾಂಕ 15-03-2026ರ ಆದಿತ್ಯವಾರ ನಾಕಟ್ಟೆ ಕೋಟಿ ಚೆನ್ನಯ್ಯ ಗರಡಿಯಲ್ಲಿ ಜರಗಿತು.

ಪೂರ್ವ ಭಾವಿ ಸಭೆಯಲ್ಲಿ,ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ರಾಜು ಎಸ್ ಪೂಜಾರಿ,ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ,ಜಗನ್ನಾಥ ಶೆಟ್ಟಿ ಚಾತುರ್ಮಾಸ್ಯ ಸಮಿತಿಯ ಅಧ್ಯಕ್ಷ ಶಿವರಾಜ್ ಪೂಜಾರಿ,ಯಡ್ತರೆ ಬಿಲ್ಲವ ಸಂಘದ ಅಧ್ಯಕ್ಷ ದೊಟ್ಟಯ್ಯ ಪೂಜಾರಿ,ನಾಕಟ್ಟೆ ,ರಮೇಶ್ ಪೂಜಾರಿ, ಸುರೇಶ್ ಬಟವಾಡೆ,ರಾಮ್ ಪೂಜಾರಿ,ಮಂಜು ಸಸಿಹಿತ್ಲು ಇತರರು ಉಪಸ್ಥಿತರಿದ್ದರು

