ಬೈಂದೂರು: ಕರ್ನಾಟಕ ಸ್ಟೇಟ್ ಟೈಲರ್ಸ್ ಅಸೋಸಿಯೇಷನ್ (ರಿ )ಮಂಗಳೂರು, ಬೈಂದೂರು ಕ್ಷೇತ್ರ ಸಮಿತಿ, ನಗರ ಸಮಿತಿ ಬೈಂದೂರು, ವಲಯ ಸಮಿತಿ ಉಪ್ಪುಂದ, ನಾವುಂದ, ವಂಡ್ಸೆ, ಕೊಲ್ಲೂರು ಮತ್ತು ಗುಜ್ಜಾಡಿ ಇವರ ವತಿಯಿಂದ ಟೈಲರ್ಸ್ ಡೇ ಕಾರ್ಯಕ್ರಮವು ಮಾರ್ಚ್ 7 ಶನಿವಾರದಂದು ಈಶ್ವರ ಮಾರಿಕಾಂಬ ದೇವಸ್ಥಾನ ಕಳವಾಡಿಯಲ್ಲಿ ನಡೆಯಿತು. ಇದರ ಅಂಗವಾಗಿ ಬೆಳಿಗ್ಗೆ ಗಂಟೆ 8:30 ರಿಂದ ಸಾಮೂಹಿಕ ಸತ್ಯನಾರಾಯಣ ಪೂಜೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿತು.
ಈ ಸಂದರ್ಭದಲ್ಲಿ ಕ್ಷೇತ್ರ ಸಮಿತಿಯ ಅಧ್ಯಕ್ಷ ರಾದ ಲಕ್ಷ್ಮಿ ಬೈಂದೂರು ಕಾರ್ಯಕ್ರಮ ಉದ್ಘಾಟಿಸಿ.ಕಾರ್ಯಕ್ರಮದಲ್ಲಿ, ಕ್ಷೇತ್ರ ಸಮಿತಿಯ ಕಾರ್ಯದರ್ಶಿ ರಾಜು ಪೂಜಾರಿ ಕೊಲ್ಲೂರು, ಕೋಶಾಧಿಕಾರಿ ರಾಜು ಮೊಗವೀರ.ಹಾಗೂ ನಗರ ಸಮಿತಿಯ ಅಧ್ಯಕ್ಷರಾದ ಶ್ರೀಮತಿ ಗೌಡ, ಕೊಲ್ಲೂರು ವಲಯ ಅಧ್ಯಕ್ಷ ರಾದ ಮಹಾಲಕ್ಷ್ಮಿ ಭಟ್, ವಂಡ್ಸೆ.ವಲಯದ ಅಧ್ಯಕ್ಷರಾದ ಸವಿತಾ ಉಪ್ಪುಂದ ವಲಯ ಅಧ್ಯಕ್ಷರಾದ ಸುಶೀಲ ದೇವಾಡಿಗ ನಾವುಂದ ವಲಯದ ಅಧ್ಯಕ್ಷರಾದ ಸವಿತಾ ಕಾರ್ವಿ ಗುಜ್ಜಾಡಿ ವಲಯದ ಅಧ್ಯಕ್ಷರಾದ ಶಾಂತಿ ಖಾರ್ವಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಮಿಕ ಇಲಾಖೆ ಅಧಿಕಾರಿಗಳು ಕಾರ್ಮಿಕ ಕಾರ್ಡ್ ಬಗ್ಗೆ ಮಾಹಿತಿಯನ್ನು ನೀಡಿದರು ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು

